ಶುಕ್ರವಾರ, ನವೆಂಬರ್ 22, 2019
27 °C

‘ತಡಂ’ ರಿಮೇಕ್‌ನಲ್ಲಿ ರಾಮ್‌

Published:
Updated:

ತಮಿಳು ಬ್ಲಾಕ್‌ಬಸ್ಟರ್‌ ಹಿಟ್‌ ಸಿನಿಮಾ ‘ತಡಂ’ ತೆಲುಗಿಗೆ ರಿಮೇಕ್‌ ಆಗುತ್ತಿದ್ದು, ‘ಇಸ್ಮಾರ್ಟ್‌ ಶಂಕರ್’ ಸಿನಿಮಾ ಖ್ಯಾತಿಯ ರಾಮ್‌ ಪೋತಿನೇನಿ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

‘ಇಸ್ಮಾರ್ಟ್‌ ಶಂಕರ್’ ಬಿಡುಗಡೆಗೂ ಮೊದಲಿನಿಂದಲೇ ರಾಮ್‌ ‘ತಡಂ’ ಚಿತ್ರವನ್ನು ತೆಲುಗಿಗೆ ರಿಮೇಕ್‌ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಇಲ್ಲಿತನಕ ಈ ಸುದ್ದಿಯನ್ನು ಚಿತ್ರತಂಡದ ಯಾರೊಬ್ಬರೂ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ‘ತಡಂ’ ಚಿತ್ರದ ರಿಮೇಕ್‌ನಲ್ಲಿ ರಾಮ್‌ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಸ್ಪಷ್ಟವಾಗಿದೆ. ಕಿಶೋರ್‌ ತಿರುಮಲ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರಕ್ಕೆ ರವಿ ಕಿಶೋರ್‌ ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರದಲ್ಲಿ ರಾಮ್‌ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ.

‘ಚಿತ್ರಲಹರಿ’ ಖ್ಯಾತಿಯ ನಿವೆತಾ ಫೆಥುರಾಜ್‌ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಇವರಿಬ್ಬರು ಒಟ್ಟಿಗೆ ನಟಿಸುತ್ತಿದ್ದಾರೆ.

‘ತಡಂ’ ತಮಿಳು ಸಿನಿಮಾದಲ್ಲಿ ಅರುಣ್‌ ವಿಜಯ್‌ ನಾಯಕನಾಗಿ ನಟಿಸಿದ್ದರು. ಇದರಲ್ಲಿ ತಾನ್ಯಾ ಹೋಪ್‌, ವಿದ್ಯಾ ಪ್ರದೀಪ್‌ ಮೊದಲಾದವರು ನಟಿಸಿದ್ದರು.

 

ಪ್ರತಿಕ್ರಿಯಿಸಿ (+)