ಥಾಯ್ಲೆಂಡ್: ರಾಣಿ ಸ್ಪರ್ಧೆ ಅನರ್ಹಗೊಳಿಸಿದ ಇ.ಸಿ

7

ಥಾಯ್ಲೆಂಡ್: ರಾಣಿ ಸ್ಪರ್ಧೆ ಅನರ್ಹಗೊಳಿಸಿದ ಇ.ಸಿ

Published:
Updated:

ಬ್ಯಾಂಕಾಕ್: ಥಾಯ್ಲೆಂಡ್ ರಾಣಿ ಉಬೊಲ್‌ರತಾನಾ ಅವರು ಪ್ರಧಾನಿ ಹುದ್ದೆಗೆ ಸ್ಪರ್ಧಿಸುವುದರಿಂದ ಅಧಿಕೃತವಾಗಿ ಅನರ್ಹಗೊಳಿಸಲಾಗಿದೆ ಎಂದು ಚುನಾವಣಾ ಆಯೋಗ (ಇ.ಸಿ) ಘೋಷಿಸಿದೆ. 

ಥಾಯ್ ರಕ್ಷಾ ಚಾರ್ಟ್ ಪಕ್ಷ ಶಿಫಾರಸು ಮಾಡಿದ್ದ ಉಬೊಲ್‌ರತಾನಾ ಅವರ ಹೆಸರನ್ನು ಹೊರತುಪಡಿಸಿ ಅಭ್ಯರ್ಥಿಗಳ ಹೆಸರುಗಳನ್ನು ಆಯೋಗ ಸೋಮವಾರ ಘೋಷಿಸಿದೆ. ‘ರಾಜಮನೆತನದ ಸದಸ್ಯರು ರಾಜಕೀಯಕ್ಕೆ ಹೊರತಾದವರು’ ಎಂದು ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ಸಹೋದರಿ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಈಚೆಗಷ್ಟೆ ರಾಜ ವಜಿರಾಲಾಂಗ್‌ಕಾರ್ನ್‌ ವಿರೋಧ ವ್ಯಕ್ತಪಡಿಸಿದ್ದರು.  

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !