ಥಾಯ್ ಗುಹೆ: ವಸ್ತು ಸಂಗ್ರಹಾಲಯ ಕೆಲಸ ಶುರು

7

ಥಾಯ್ ಗುಹೆ: ವಸ್ತು ಸಂಗ್ರಹಾಲಯ ಕೆಲಸ ಶುರು

Published:
Updated:
Deccan Herald

ಬ್ಯಾಂಕಾಕ್: ಫುಟ್ಬಾಲ್ ತಂಡದ 13 ಸದಸ್ಯರು ಪವಾಡಸದೃಶ ರೀತಿಯಲ್ಲಿ ಬದುಕಿ ಬಂದ ಚಿಯಾಂಗ್ ರಾಯ್‌ನ ಥಾಮ್ ಲುವಾಂಗ್ ಗುಹೆಯು ವಸ್ತುಸಂಗ್ರಹಾಲಯದ ರೂಪ ಪಡೆಯುತ್ತಿದ್ದು, ಕಾಮಗಾರಿಗೆ ಗುರುವಾರ ಚಾಲನೆ ಸಿಕ್ಕಿದೆ. 

ಜೂನ್ 23ರಂದು ಗುಹೆ ಪ್ರವೇಶಿಸಿದ್ದ 12 ಬಾಲಕರು ಹಾಗೂ ಒಬ್ಬ ತರಬೇತುದಾರ, ಪ್ರವಾಹದ ನೀರು ತುಂಬಿದ್ದರಿಂದ ಗುಹೆಯಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ಎರಡು ವಾರಗಳ ಬಳಿಕ ಕಾರ್ಯಾಚರಣೆ ನಡೆಸಿ, ಅವರನ್ನು ರಕ್ಷಿಸಲಾಗಿತ್ತು. ಇದು  ಜಗತ್ತಿನ ಗಮನ ಸೆಳೆದಿತ್ತು. 

ಬೌದ್ಧ ಸಂಪ್ರದಾಯದಂತೆ ಧಾರ್ಮಿಕ ಆಚರಣೆಗಳನ್ನು ಪೂರೈಸಿ ಕಾಮಗಾರಿ ಆರಂಭಿಸಲಾಯಿತು. ಸುಮಾರು ₹2 ಕೋಟಿ ವೆಚ್ಚದಲ್ಲಿ ಮ್ಯೂಸಿಯಂ ತಲೆಎತ್ತಲಿದೆ. ಸ್ಥಳೀಯ ಕಲಾವಿದ ಚಲೆರ್ಮಚಿ ಕೊಸಿಟ್‌ಪಿಪಟ್ ಅವರು ಹಣ ವ್ಯಯಿಸುತ್ತಿದ್ದಾರೆ.

ವಸ್ತು ಸಂಗ್ರಹಾಲಯದಲ್ಲಿ ಏನೇನಿದೆ?: ರಕ್ಷಣಾ ಕಾರ್ಯಾಚರಣೆಯಲ್ಲಿ ಮೃತಪಟ್ಟ ಮುಳುಗುತಜ್ಞ ಸಮರನ್ ಕುನಾನ್ ಅವರ ನಾಲ್ಕು ಮೀಟರ್ ಎತ್ತರದ ಪ್ರತಿಮೆಯನ್ನು ವಸ್ತು ಸಂಗ್ರಹಾಲಯದ ಮುಂಭಾಗದಲ್ಲಿ ನಿರ್ಮಿಸಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಯ ಹಂತಗಳನ್ನು 13 ಮೀಟರ್ ಉದ್ದದ ವರ್ಣಚಿತ್ರದಲ್ಲಿ ಚಿತ್ರಿಸಲಾಗುತ್ತಿದೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !