ಕೆಲಸಕ್ಕಿದ್ದ ಕಂಪನಿಯಲ್ಲಿ ಚಿನ್ನಾಭರಣ ಕದ್ದ

7
ಸಂಪಂಗಿರಾಮನಗರ ಪೊಲೀಸರಿಂದ ಮಾಜಿ ನೌಕರ ಸೆರೆ

ಕೆಲಸಕ್ಕಿದ್ದ ಕಂಪನಿಯಲ್ಲಿ ಚಿನ್ನಾಭರಣ ಕದ್ದ

Published:
Updated:

ಬೆಂಗಳೂರು: ಸಂಪಂಗಿರಾಮನಗರದ ನೆಪ್ಲಾಗ್ ಲಾಜಿಸ್ಟಿಕ್ ಕಂಪನಿಗೆ ಬಂದಿದ್ದ ಚಿನ್ನಾಭರಣವಿದ್ದ 5 ಪಾರ್ಸಲ್‌ ಬಾಕ್ಸ್‌ಗಳನ್ನು ಕದ್ದಿದ್ದ ಮಾಜಿ ನೌಕರ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನದ ಅನಿಲ್‌ಕುಮಾರ್ ಸೈನಿ ಹಾಗೂ ಆತನ ಸ್ನೇಹಿತ ಎಚ್‌.ಅನಿಲ್‌ಕುಮಾರ್‌ ಬಂಧಿತರು. ಅವರಿಂದ ₹59.10 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ.

‘ಕಂಪನಿಯ ಕಚೇರಿಗೆ ಮುಂಬೈನಿಂದ ಏರ್‌ಲೈನ್ಸ್ ಮೂಲಕ ಜ. 31ರಂದು ಬಂದಿದ್ದ 6 ಪಾರ್ಸಲ್‌ಗಳ ಪೈಕಿ 5 ಪಾರ್ಸಲ್‌ಗಳು ಕಳುವಾಗಿದ್ದವು. ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಹೋಶಿಯಾರ್ ಸಿಂಗ್‌ ಸೈನಿ ಮೇಲೆ ಅನುಮಾನ ವ್ಯಕ್ತಪಡಿಸಿ ವ್ಯವಸ್ಥಾಪಕರು ದೂರು ನೀಡಿದ್ದರು’ ಎಂದು ಕೇಂದ್ರ ವಿಭಾಗದ ಡಿಸಿಪಿ ಡಿ.ದೇವರಾಜ್ ಹೇಳಿದರು.

‘ಹೋಶಿಯಾರ್‌ನನ್ನು ವಿಚಾರಣೆಗೆ ಒಳಪಡಿಸಿದಾಗ, ’ನಾನು ಪಾರ್ಸಲ್ ಕದ್ದಿಲ್ಲ. ಮಾಜಿ ನೌಕರ ಅನಿಲ್‌ಕುಮಾರ್‌ ಕೃತ್ಯ ಎಸಗಿರಬಹುದು’ ಎಂದು ಸುಳಿವು ನೀಡಿದ್ದ. ರಾಜಸ್ಥಾನಕ್ಕೆ ಹೋಗಿದ್ದ ಪೊಲೀಸರು, ಅನಿಲ್‌ಕುಮಾರ್ ಸೈನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ’ ಎಂದರು.

ನಕಲಿ ಕೀ ಮಾಡಿಸಿದ್ದ: ‘ಲಾಜಿಸ್ಟಿಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅನಿಲ್‌ಕುಮಾರ್‌ ಸೈನಿ, ಕಚೇರಿಯ ನಕಲಿ ಬೀಗದ ಕೈ ಮಾಡಿಸಿಟ್ಟುಕೊಂಡಿದ್ದ’ ಎಂದು ದೇವರಾಜ್ ಹೇಳಿದರು.

‘ಕೆಲಸ ಬಿಟ್ಟು ರಾಜಸ್ಥಾನಕ್ಕೆ ಹೋದ ನಂತರ ಆ ಕೀಯನ್ನು, ನಗರದ ನಂದಿನಿ ಲೇಔಟ್‌ನ ಬೇರೊಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅನಿಲ್‌ಕುಮಾರ್‌ಗೆ ನೀಡಿದ್ದ. ‘ಕಂಪನಿಗೆ ದೊಡ್ಡ ದೊಡ್ಡ ಪಾರ್ಸಲ್‌ಗಳು ಬರುತ್ತವೆ. ಅವು ಬಂದಾಗ ಮಾಹಿತಿ ನೀಡುತ್ತೇನೆ. ನಿನ್ನ ಬಳಿಯ ಕೀ ಬಳಸಿ ಅವುಗಳನ್ನು ತೆಗೆದುಕೊಂಡು ಬಾ’ ಎಂದು ಹೇಳಿದ್ದ. ಅದರಂತೆ ಅನಿಲ್‌, ಪಾರ್ಸಲ್‌ಗಳನ್ನು ಕದ್ದು ತನ್ನ ಬಳಿ ಇಟ್ಟುಕೊಂಡಿದ್ದ. ರಾಜಸ್ಥಾನಕ್ಕೆ ತೆಗೆದುಕೊಂಡು ಹೋಗಲು ಸಿದ್ಧವಾಗಿದ್ದ’ ಎಂದು ತಿಳಿಸಿದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !