ಚಿಕ್ಕಪ್ಪನ ಮನೆಯಲ್ಲೇ ₹ 20 ಲಕ್ಷದ ಚಿನ್ನ ಕದ್ದ

7

ಚಿಕ್ಕಪ್ಪನ ಮನೆಯಲ್ಲೇ ₹ 20 ಲಕ್ಷದ ಚಿನ್ನ ಕದ್ದ

Published:
Updated:

ಬೆಂಗಳೂರು: ಜೂಜಿನಲ್ಲಿ ಮಾಡಿದ್ದ ಸಾಲ ತೀರಿಸಲು ಚಿಕ್ಕಪ್ಪನ ಮನೆಯಲ್ಲೇ ₹ 20 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದ ಉದಯ್‌ಕುಮಾರ್ ಎಂಬಾತ ಶ್ರೀರಾಂಪುರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

‘ಗೌತಮ್‌ನಗರ ನಿವಾಸಿಯಾದ ಉದಯ್, ಶಾಲಾ ವಾಹನದ ಚಾಲಕನಾಗಿದ್ದ. ಇತ್ತೀಚೆಗೆ ಆತನ ಚಿಕ್ಕಪ್ಪ ಹರಿ ಅವರ ಮನೆಯಲ್ಲಿ ಕಳ್ಳತನವಾಗಿತ್ತು. ಅನುಮಾನದ ಮೇಲೆ ಉದಯ್‌ನನ್ನು ಠಾಣೆಗೆ ಕರೆಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ತಾನೇ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡ. ಆತನಿಂದ 726 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದೇವೆ’ ಎಂದು ಪೊಲೀಸರು ಹೇಳಿದರು.

ಗೌತಮ್ ಪೋಷಕರು ಹಾಗೂ ಹರಿ ಕುಟುಂಬ ಒಂದೇ ಕಟ್ಟಡದಲ್ಲಿ ನೆಲೆಸಿವೆ. ಕುದುರೆ ರೇಸ್ ಹುಚ್ಚಿಗೆ ಬಿದ್ದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಆರೋಪಿ, ಗೆಳೆಯರ ಬಳಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ. ಅವರು ಹಣ ಮರಳಿಸುವಂತೆ ನಿತ್ಯ ಮನೆ ಹತ್ತಿರ ಹೋಗಿ ಗಲಾಟೆ ಮಾಡುತ್ತಿದ್ದರು. ಇದರಿಂದ ಬೇಸರಗೊಂಡಿದ್ದ ಆತ, ಚಿಕ್ಕಪ್ಪನ ಮನೆಗೇ ಕನ್ನ ಹಾಕಲು ನಿರ್ಧರಿಸಿದ್ದ.

ಮೊದಲು ಬೀರುವಿನ ಕೀಯನ್ನು ನಕಲು ಮಾಡಿಸಿಕೊಂಡ ಆತ, ಆ.23ರಂದು ಮನೆಗೆ ನುಗ್ಗಿ 726 ಗ್ರಾಂ ಚಿನ್ನಾಭರಣ ದೋಚಿದ್ದ. ಅದರಲ್ಲಿ 250 ಗ್ರಾಂ ಚಿನ್ನ ಮಾರಿ ಸಾಲ ತೀರಿಸಿದರೆ, ಉಳಿದ ಆಭರಣವನ್ನು ಗೆಳೆಯನ ಮನೆಯಲ್ಲಿಟ್ಟಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !