‘ಗುಳೆ ತಪ್ಪಿಸಲು ಯೋಜನೆ; ಸಲಹೆ ನೀಡಿ’- ಸಿ.ಎಂ

ಮಂಗಳವಾರ, ಮಾರ್ಚ್ 19, 2019
21 °C

‘ಗುಳೆ ತಪ್ಪಿಸಲು ಯೋಜನೆ; ಸಲಹೆ ನೀಡಿ’- ಸಿ.ಎಂ

Published:
Updated:

ವಿಜಯಪುರ: ‘ಬಂಜಾರ ಸಮಾಜದ ಜನರು ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಲು ಹೊಸ ಯೋಜನೆ ರೂಪಿಸುತ್ತಿದ್ದು, ಇದಕ್ಕೆ ಸಮುದಾಯದ ಮುಖಂಡರು ಕೂಡ ಸಲಹೆ ನೀಡಬಹುದು’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ಭಾನುವಾರ ಇಲ್ಲಿ ನಡೆದ ಬಂಜಾರ ಜನ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಗುಳೆ ಹೋಗುವಾಗ ಅಪಘಾತಕ್ಕೀಡಾಗಿ, ಪ್ರಾಣ ಕಳೆದುಕೊಳ್ಳುವ ಘಟನೆಗಳು ಈ ಹಿಂದೆ ಆಗಾಗ್ಗೆ ನಡೆದಿವೆ. ಇದನ್ನು ತಪ್ಪಿಸಲು ತಾಂಡಾಗಳಲ್ಲೇ ಉದ್ಯೋಗ ಕೊಡಲು ಚಿಂತಿಸಲಾಗಿದೆ. ಇದಕ್ಕೆ ಸಮಾಜದ ಮುಖಂಡರು ಸಾಥ್‌ ನೀಡಿದರೆ, ಯೋಜನೆ ಅನುಷ್ಠಾನಕ್ಕೆ ಸರ್ಕಾರ ಸಿದ್ಧವಿದೆ’ ಎಂದು ಹೇಳಿದರು.

‘ಉದ್ದೇಶಿತ ಕಾರ್ಯಕ್ರಮಕ್ಕೆ ವಿಜಯಪುರ ಜಿಲ್ಲೆಯನ್ನು ಪೈಲಟ್‌ ಯೋಜನೆಯಡಿ ಆಯ್ಕೆ ಮಾಡಿಕೊಳ್ಳಲಾಗುವುದು. ಜಿಲ್ಲಾಡಳಿತ ಕೂಡ ಈ ನಿಟ್ಟಿನಲ್ಲಿ ಸಮಗ್ರ ವರದಿಯನ್ನು ಕೊಡಬೇಕು. ಎಲ್ಲವನ್ನೂ ಸೇರಿಸಿ, ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು’ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಮಾತನಾಡಿ ‘ಬಂಜಾರರ ಹಕ್ಕೊತ್ತಾಯ ಹೆಚ್ಚಿದೆ. ಸಮಾಜ ಸಂಘಟನೆಗೊಂಡಿದೆ. ನಿಮ್ಮ ಬೇಡಿಕೆಗಳಿಗೆ ನಾವೂ ಧ್ವನಿಯಾಗಲಿದ್ದೇವೆ. ನಿಮಗೆ ರಾಜಕೀಯ ಸಹಕಾರವನ್ನು ಕೊಡಲಿದ್ದೇವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !