ಮಾಲಿನ್ಯ ಮುಕ್ತ ಗ್ರಾಮ ನಿರ್ಮಾಣ ಚಿಂತನೆ

7

ಮಾಲಿನ್ಯ ಮುಕ್ತ ಗ್ರಾಮ ನಿರ್ಮಾಣ ಚಿಂತನೆ

Published:
Updated:
ಬೆಂಗಳೂರು ಉತ್ತರ ತಾಲೂಕು ಪಂಚಾಯತಿ ಅಧ್ಯಕ್ಷೆ ಜ್ಯೋತಿ ಕಲ್ಲೇಶ್ ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಯುನಕ್ತಿ ಬೆಂಗಳೂರು ಸಂಸ್ಥೆಯ ಸಂಸ್ಥಾಪಕಿ ನೀರಜ, ಮೀನುಕುಂಟೆ ಗ್ರಾಮ ಪಂಚಾಯ‌ತಿ ಅಭಿವೃದ್ಧಿ ಅಧಿಕಾರಿ ಅಜಯ್ ಇದ್ದಾರೆ.

ಬೆಂಗಳೂರು: ‘ಚನ್ನಹಳ್ಳಿ ಗ್ರಾಮದ ಜನ ಇಂದಿಗೂ ಒಲೆ ಊದಿ, ಹೊಗೆ ಕುಡಿದು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮಾಲಿನ್ಯ ಮುಕ್ತ ಗ್ರಾಮ ನಿರ್ಮಾಣಕ್ಕೆ ಚಿಂತನೆ ನಡೆಸಲಾಗುತ್ತಿದೆ’ ಎಂದು ಯುನಕ್ತಿ ಬೆಂಗಳೂರು ಸಂಸ್ಥೆಯ ಸಂಸ್ಥಾಪಕಿ ನೀರಜ ಹೇಳಿದರು.

ಸಿ.ಎಸ್.ಆರ್ ಚನ್ನಹಳ್ಳಿ ಯೋಜನೆಯಡಿ ಭಾರತ ಸಮುದಾಯ ಅಭಿವೃದ್ಧಿ ಸೇವಾ ಸಂಸ್ಥೆ ಹಾಗೂ ಯುನಕ್ತಿ ಸಂಸ್ಥೆಯ  ಸಹಯೋಗದಲ್ಲಿ ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಚನ್ನಹಳ್ಳಿಯಲ್ಲಿ ಸರ್ಕಾರಿ ಶಾಲಾ ವೇದಿಕೆ ಉದ್ಘಾಟನೆ, ಕೈತೋಟ ಸಸಿಗಳ ವಿತರಣೆ ಹಾಗೂ ಅರಣ್ಯ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗ್ರಾಮದಲ್ಲಿ 305 ಮನೆಗಳಿದ್ದು, 60ರಲ್ಲಿ ಶೌಚಾಲಯವಿಲ್ಲ. 13 ಮನೆಗಳಲ್ಲಿ  ಹೊಗೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಮನೆ ಸುತ್ತಲಿನ ಗಾಳಿ ಮತ್ತು ನೀರು ಮಲಿನವಾಗುತ್ತಿದೆ. ಭವಿಷ್ಯದಲ್ಲಿ ಈ ಸಮಸ್ಯೆಯಿಂದ ಮುಕ್ತರಾಗಲು ಸಂಸ್ಥೆ ಚಿಂತನೆ ನಡೆಸಿದೆ’ ಎಂದು ತಿಳಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !