ಪಾಕ್‌: ಬ್ಯಾಂಕ್‌ ಖಾತೆಗಳಿಗೆ ಕನ್ನ

7

ಪಾಕ್‌: ಬ್ಯಾಂಕ್‌ ಖಾತೆಗಳಿಗೆ ಕನ್ನ

Published:
Updated:

ಇಸ್ಲಾಮಾಬಾದ್‌: ಸಾವಿರಾರು ಮಂದಿಯ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕಿ ಹಣ ಲೂಟಿ ಮಾಡಿರುವುದು ಪಾಕಿಸ್ತಾನದಲ್ಲಿ ಪತ್ತೆಯಾಗಿದೆ.

ಸುಮಾರು 12 ಬ್ಯಾಂಕ್‌ಗಳಲ್ಲಿನ 8 ಸಾವಿರ ಗ್ರಾಹಕರ ಖಾತೆಗಳ ಮಾಹಿತಿ ಪಡೆದು ಅಕ್ಟೋಬರ್‌ 27 ಮತ್ತು 28ರಂದು ಕನ್ನ ಹಾಕಲಾಗಿದೆ. ಈ ಖಾತೆಗಳಿಂದ ಸುಮಾರು ₹26 ಲಕ್ಷ ಪಡೆದು ವಂಚಿಸಲಾಗಿದೆ. ಅಂತರರಾಷ್ಟ್ರೀಯ ಕಾರ್ಡ್‌ಗಳನ್ನು ಬಳಸಿ ಈ ಹಣ ಲೂಟಿ ಮಾಡಲಾಗಿದೆ.

ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಖಾನ್‌ ಸಂಶೋಧನಾ ಪ್ರಯೋಗಾಲಯದ ಮಾಜಿ ಮುಖ್ಯ ವಿಜ್ಞಾನಿ ಅವರು ತಮ್ಮ ಖಾತೆಯಿಂದ ₹30 ಲಕ್ಷ ಲೂಟಿ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ದೂರು ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !