ಟ್ರಂಪ್‌ ವಲಸೆ ನೀತಿಗೆ ವಿರೋಧ: ಅಮೆರಿಕದಲ್ಲಿ ಪ್ರತಿಭಟನೆ

7

ಟ್ರಂಪ್‌ ವಲಸೆ ನೀತಿಗೆ ವಿರೋಧ: ಅಮೆರಿಕದಲ್ಲಿ ಪ್ರತಿಭಟನೆ

Published:
Updated:
ವಲಸಿಗ ಪೋಷಕರಿಂದ ಮಕ್ಕಳನ್ನು ಬೇರ್ಪಡಿಸಿದ್ದನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ಪುಟಾಣಿ

ವಾಷಿಂಗ್ಟನ್‌: ಭಾರತೀಯ ಅಮೆರಿಕನ್ನರು ಸೇರಿ ಸಾವಿರಾರು ಮಂದಿ ಅಮೆರಿಕದ ಹಲವು ನಗರಗಳಲ್ಲಿ ರಸ್ತೆಗಿಳಿದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹೊಸ ವಲಸೆ ನೀತಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. 

ವಲಸಿಗ ಕುಟುಂಬದಿಂದ ಮಕ್ಕಳನ್ನು ಬೇರ್ಪಡಿಸುವ ’ಶೂನ್ಯ ಸಹಿಷ್ಣುತೆ’ ನೀತಿಯಿಂದಾಗಿ ಅಮೆರಿಕದ ಗಡಿಯಲ್ಲಿ ಸುಮಾರು 2000 ಮಕ್ಕಳು ಅವರ ಪೋಷಕರು ಮತ್ತು ಪಾಲಕರಿಂದ ಬೇರ್ಪಟ್ಟಿದ್ದಾರೆ. ಇದನ್ನು ವಿರೋಧಿಸಿ ಶ್ವೇತ ಭವನದ ಸಮೀಪ ಸೇರಿದಂತೆ ಇತರೆಡೆ ನಾಗರಿಕರು ಮೆರವಣಿಗೆ ನಡೆಸಿದ್ದಾರೆ. 

ಹಕ್ಕುಗಳ ಹೋರಾಟಗಾರರು ಹಾಗೂ ಡೆಮೋಕ್ರಟಿಕ್‌ ಪಕ್ಷದ ಮುಖಂಡರ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆಗಳು ನಡೆದಿವೆ. ವಲಸೆ ನೀತಿಗಳು ಮಾನವೀಯತೆಯನ್ನು ಒಳಗೊಂಡಿರಲಿ, ಕಾನೂನು ಬಾಹಿರವಾಗಿ ಗಡಿ ದಾಟುವ ಪೋಷಕರಿಂದ ಯಾವುದೇ ಸಂದರ್ಭದಲ್ಲಿಯೂ ಮಕ್ಕಳನ್ನು ಬೇರ್ಪಡಿಸಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. 

’ಅಕ್ರಮವಾಗಿ ನಮ್ಮ ರಾಷ್ಟ್ರದೊಳಗೆ ಪ್ರವೇಶಿಸುವ ಜನರನ್ನು ಮರಳಿ ಕಳುಹಿಸುವ ಸಲುವಾಗಿ ವರ್ಷಗಟ್ಟಲೆ ಕಾನೂನು ಕಾರ್ಯಾಚರಣೆ ನಡೆಸುವುದಕ್ಕಿಂತಲೂ, ನಾವು ತಕ್ಷಣವೇ ಹಿಮ್ಮೆಟ್ಟಿಸುವ ಕಾರ್ಯ ನಡೆಸಬೇಕಿದೆ. ಇಡೀ ಜಗತ್ತಿನಲ್ಲಿ ನಮ್ಮ ಕಾನೂನುಗಳು ಅತ್ಯಂತ ಮೆದುವಾದುವು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟ್ವೀಟಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !