ಟಯನಾನ್ಮೆನ್‌ ಹಿಂಸಾಚಾರ: ಚೀನಾ ಸಮರ್ಥನೆ

ಬುಧವಾರ, ಜೂನ್ 19, 2019
28 °C

ಟಯನಾನ್ಮೆನ್‌ ಹಿಂಸಾಚಾರ: ಚೀನಾ ಸಮರ್ಥನೆ

Published:
Updated:

ಬೀಜಿಂಗ್‌ (ಎಎಫ್‌ಪಿ): ಟಯನಾನ್ಮೆನ್‌ ಹತ್ಯಾಕಾಂಡವನ್ನು ಚೀನಾ ಸೋಮವಾರ ಸಮರ್ಥಿಸಿಕೊಂಡಿದೆ. ಆ ಹಿಂಸಾಚಾರವನ್ನು ನಿಭಾಯಿಸಿದ ರೀತಿ ದೇಶದ ಪ್ರತಿರೋಧಕ ಶಕ್ತಿ ಹೆಚ್ಚಿಸಿತ್ತು ಎಂದು ಚೀನಾದ ಅಧಿಕೃತ ಸುದ್ದಿಪತ್ರಿಕೆ ತನ್ನ ಸಂಪಾದಕೀಯದಲ್ಲಿ ಬರೆದುಕೊಂಡಿದೆ. 

ಹತ್ಯಾಕಾಂಡದ 30ನೇ ವರ್ಷಾಚರಣೆ ನಿಮಿತ್ತ ಬರೆದ ಸಂಪಾದಕೀಯದಲ್ಲಿ ಪತ್ರಿಕೆ ಹೀಗೆ ಹೇಳಿದೆ. ಜೂನ್‌ 4, 1989ರಲ್ಲಿ ಟಯನಾನ್ಮೆನ್‌ ಸ್ಕ್ವೇರ್‌ನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಸಾವಿರಾರು ಜನ ಸಾವಿಗೀಡಾಗಿದ್ದರು. ಪ್ರಜಾಪ್ರಭುತ್ವ ಪರವಾಗಿ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನ ಪ್ರತಿಭಟನೆ ನಡೆಸುತ್ತಿದ್ದರು. ಇದನ್ನು ಹತ್ತಿಕ್ಕಲು ಭದ್ರತಾ ಪಡೆಗಳು ದಾಳಿ ನಡೆಸಿದ್ದವು. 

‘ಚೀನಾದ ಸಮಾಜಕ್ಕೆ ಆ ಹಿಂಸಾಚಾರ ಮದ್ದು ನೀಡಿದಂತಿತ್ತು. ಭವಿಷ್ಯದಲ್ಲಿ ಯಾರೂ ಅಂತಹ ರಾಜಕೀಯ ಪ್ರತಿಭಟನೆ ಕೈಗೊಳ್ಳದಂತಿರಲು ಎಚ್ಚರಿಕೆ ನೀಡುವ ಜೊತೆಗೆ, ಸರ್ಕಾರದ ಶಕ್ತಿಯನ್ನು ಹೆಚ್ಚಿಸಿತ್ತು’ ಎಂದು ಕಮ್ಯುನಿಸ್ಟ್‌ ಪಕ್ಷದ ಮುಖವಾಣಿ ‘ಪೀಪಲ್ಸ್‌ ಡೈಲಿ’ ವರದಿ ಮಾಡಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !