ಗುರುವಾರ , ನವೆಂಬರ್ 21, 2019
21 °C

ಹುಲಿ ಉಗುರು ಮಾರಾಟ: ಇಬ್ಬರ ಬಂಧನ

Published:
Updated:
Prajavani

ಗುಂಡ್ಲುಪೇಟೆ: ಹುಲಿ ಉಗುರು ಮತ್ತು ನರಿ ಹಲ್ಲುಗಳ ಮಾರಾಟಕ್ಕೆ ಯತ್ನಿಸಿದ ಆರೋಪದಡಿ ಇಬ್ಬರನ್ನು ಗುಂಡ್ಲುಪೇಟೆ ಬಫರ್ ಜೋನ್ ವಲಯದ ವಲಯಾರಣ್ಯಾಧಿಕಾರಿ ಲೋಕೇಶ್ ತಂಡ ಗುರುವಾರ ಬಂಧಿಸಿದೆ.

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅಂಗಡಿ ಗ್ರಾಮದ ಧವನ್ (45) ಮತ್ತು ಗೋಕುಲ್ (17) ಬಂಧಿತ ಆರೋಪಿಗಳು.

ಗುಂಡ್ಲುಪೇಟೆ ಪಟ್ಟಣ ಹಾಗೂ ಬೇಗೂರು ಭಾಗದಲ್ಲಿ ಹುಲಿ ಉಗುರು ಮತ್ತು ನರಿ ಹಲ್ಲುಗಳ ಮಾರಾಟ ಮಾಡಲು ಯತ್ನಿಸಿದಾಗ ದಾಳಿ ನಡೆಸಲಾಗಿದೆ. ಆರೋಪಿಗಳಿಂದ ಆರು ಹುಲಿಯ ಉಗುರು, ನರಿಯ ಐದು ಹಲ್ಲುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಹಕ್ಕಿಪಿಕ್ಕಿ ಜನಾಂಗದವರಾಗಿದ್ದು, ಅನೇಕ ದಿನಗಳಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರ್‌ಎಫ್ಒ ರಾಘವೇಂದ್ರ ಆಗಸೆ, ಸಿಬ್ಬಂದಿ ದೇವರಾಜು, ಹರೀಶ್, ಮುದ್ದರಾಜು ಇದ್ದರು.

ಪ್ರತಿಕ್ರಿಯಿಸಿ (+)