ತಿಕೋಟಾ: ವಿದ್ಯುತ್ ವ್ಯತ್ಯಯ ನಾಳೆ

7

ತಿಕೋಟಾ: ವಿದ್ಯುತ್ ವ್ಯತ್ಯಯ ನಾಳೆ

Published:
Updated:

ತಿಕೋಟಾ: ಗ್ರಾಮದ 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ಇದೇ 6ರ ಶನಿವಾರ ತುರ್ತು ನಿರ್ವಹಣೆ ಕಾರ್ಯ ನಡೆಯಲಿದೆ.

ತಿಕೋಟಾ 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ, 33 ಕೆ.ವಿ. ಬಿಜ್ಜರಗಿ ಸ್ಟೇಷನ್‌ದಿಂದ ಸರಬರಾಜಾಗುವ ಹಳ್ಳಿಗಳಾದ ತಿಕೋಟಾ, ಕೋಟ್ಯಾಳ, ರತ್ನಾಪುರ, ಹೊನವಾಡ, ಬಾಬಾನಗರ, ಬಿಜ್ಜರಗಿ, ಕನಮಡಿ, ಗೊಣಸಗಿ, ಹುಬನೂರ, ಟಕ್ಕಳಕಿ, ಕಳ್ಳಕವಟಗಿ, ಸೋಮದೇವರಹಟ್ಟಿ, ಕೆ.ಸಿದ್ದಾಪುರ ಐ.ಪಿ.ಲೈನ್ ಹಾಗೂ ಇನ್ನಿತರ ಹಳ್ಳಿಗಳಿಗೆ ಶನಿವಾರ ಬೆಳಿಗ್ಗೆ 9ರಿಂದ ಸಂಜೆ 4ಗಂಟೆವರೆಗೆ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಕಾರ್ಯ ನಿರ್ವಾಹಕ ಎಂಜಿನಿಯರ್‌ ಮನವಿ ಮಾಡಿದ್ದಾರೆ.

ಮುದ್ದೇಬಿಹಾಳ: ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ವಿಜಯಪುರ: ಮುದ್ದೇಬಿಹಾಳ ತಾಲ್ಲೂಕಿನ ಮುದ್ದೇಬಿಹಾಳ ಹಾಗೂ ನಾಲತವಾಡ ಪಟ್ಟಣದಲ್ಲಿ ಐಪಿಡಿಎಸ್ ಯೋಜನೆಯಡಿ ಹಳೆಯ ವಾಹಕ ಬದಲಾವಣೆ, ಜೋತು ಬಿದ್ದ ವಾಹಕಗಳ ಮಧ್ಯೆ ಕಂಬ ಅಳವಡಿಸುವುದು, ಹೊಸ ಪರಿವರ್ತಕ ಅಳವಡಿಸುವುದು ಮುಂತಾದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಎರಡೂ ಪಟ್ಟಣಗಳಲ್ಲಿ ಡಿಸೆಂಬರ್ 31ರವರೆಗೆ ವಿದ್ಯುತ್ ಸರಬರಾಜುವಿನಲ್ಲಿ ಪ್ರತಿ ದಿನ ಅನಿಯಮಿತ ನಿಲುಗಡೆ ಮಾಡಲಾಗುತ್ತಿದೆ. ಸಾರ್ವಜನಿಕರು ಸಹಕರಿಸುವಂತೆ ಮುದ್ದೇಬಿಹಾಳ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !