ಶಿಶುವಿಗೆ ಹಿಂಸೆ: ಐಎಎಸ್‌ ಅಧಿಕಾರಿ ದೂರು

7

ಶಿಶುವಿಗೆ ಹಿಂಸೆ: ಐಎಎಸ್‌ ಅಧಿಕಾರಿ ದೂರು

Published:
Updated:

ಬೆಂಗಳೂರು: ತಮ್ಮ ನವಜಾತ ಶಿಶುವಿಗೆ ಆಸ್ಪತ್ರೆಯೊಂದರಲ್ಲಿ ಹಿಂಸೆ ಕೊಟ್ಟಿದ್ದಾರೆ ಎಂದು ಆರೋಪಿಸಿ ಐಎಎಸ್‌ ಅಧಿಕಾರಿ ಪಲ್ಲವಿ ಅಕುರಾತಿ ಅವರು ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಅಧಿಕಾರಿಗೆ ದೂರು ಕೊಟ್ಟಿದ್ದಾರೆ.

ದೂರು ಬಂದಿರುವುದನ್ನು ಬೆಂಗಳೂರು ಜಿಲ್ಲಾ ಆರೋಗ್ಯಾಧಿಕಾರಿ ಶ್ರೀನಿವಾಸ್‌ ಖಚಿತಪಡಿಸಿದರು. ಆದರೆ ದೂರಿನ ಕುರಿತು ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದರು.

ಐಎಎಸ್‌ ಅಧಿಕಾರಿಗೇ ಈ ರೀತಿಯ ಕೆಟ್ಟ ಅನುಭವ ಆಗಿದೆ; ಇನ್ನು ಸಾಮಾನ್ಯ ಜನರಿಗೆ ಈ ಥರದ ಆಸ್ಪತ್ರೆಗಳಲ್ಲಿ ಎಂತಹ ಚಿಕಿತ್ಸೆ ದೊರೆಯಲಿದೆ? ಆಸ್ಪತ್ರೆ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅಧಿಕಾರಿ ದೂರಿನಲ್ಲಿ ತಿಳಿಸಿರುವುದಾಗಿ ಮೂಲಗಳು ಹೇಳಿವೆ.

ಈ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗುವವರಿಗೆ ಸಹಜ ಹೆರಿಗೆ ಮಾಡಿಸುವ ಬದಲು ಸಿಜೇರಿಯನ್‌ ಮಾಡಿಸಲಾಗುತ್ತಿದೆ. ನನಗೆ ಸಿಜೇರಿಯನ್‌ ಹೆರಿಗೆ ಮಾಡಿಸುವ ಮೊದಲು ಸ್ಕ್ಯಾನಿಂಗ್‌ ಮಾಡಿಸಿರಲಿಲ್ಲ. ನವಜಾತ ಶಿಶುಗಳಿಗೆ ಫೋಟೊಥೆರಪಿ ಚಿಕಿತ್ಸೆ ಮಾಡಿಸುವಂತೆ ಅಲ್ಲಿನ ವೈದ್ಯರು ಶಿಫಾರಸು ಮಾಡುತ್ತಿದ್ದಾರೆ. ಈ ಚಿಕಿತ್ಸೆಗೆ ಪ್ರತಿದಿನ ₹3 ಸಾವಿರ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದೂ ಅವರು ದೂರಿನಲ್ಲಿ ವಿವರಿಸಿದ್ದಾರೆ.

ಜುಲೈನಲ್ಲಿ ಪಲ್ಲವಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !