ಟೂರ್ ಬಿಟ್ಸ್

7

ಟೂರ್ ಬಿಟ್ಸ್

Published:
Updated:
Prajavani

ಗುಜರಾತ್: 14ರವರೆಗೆ ಗಾಳಿಪಟ ಹಬ್ಬ

ಗುಜರಾತ್‌ ನಲ್ಲಿ ಜನವರಿ 6ರಿಂದ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಆರಂಭವಾಗಿದೆ. ಆ ರಾಜ್ಯದ ವಿವಿಧ ನಗರಗಳಲ್ಲಿ ಮಕರಸಂಕ್ರಾಂತಿ ಹಬ್ಬದವರೆಗೂ ಈ ಉತ್ಸವ ಮುಂದುವರಿಯಲಿದೆ. ಗುಜರಾತ್ ಪ್ರವಾಸೋದ್ಯಮ ಇಲಾಖೆ ತುಂಬಾ ಆಸ್ತೆಯಿಂದ ಈ ಗಾಳಿಪಟ ಹಬ್ಬವನ್ನು ಆಯೋಜಿಸುತ್ತಿದೆ. ದೇಶ ವಿದೇಶಗಳಿಂದ ಜನರು ಗಾಳಿಪಟ ಹಾರಿಸಲು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಹ್ಮದಾಬಾದ್, ವಡೋದರ,ಸೂರತ್ ಮತ್ತು ರಾಜ್ ಕೋಟ್, ಜೋತ್ಪುರ್-ಸೋನಾಗಢ, ಸಪುತಾರ-ಧೋರ್ಡೊ ನಲ್ಲಿ ಗಾಳಿಪಟ ಉತ್ಸವ ನಡೆಯುತ್ತಿದೆ. ಗುಜರಾತ್ ಗೆ ಪ್ರವಾಸ ಬೆಳೆಸಿದರೆ, ಗಾಳಿಪಟ್ಟ ಹಬ್ಬದ ಜತೆಗೆ, ಚುಮುಚುಮು ಚಳಿಯಲ್ಲಿ ಆ ರಾಜ್ಯದ ಅಪರೂಪದ ಪ್ರವಾಸಿ ತಾಣಗಳನ್ನು ವೀಕ್ಷಿಸಬಹುದು. ಹೆಚ್ಚಿನ ಮಾಹಿತಿಗೆ http://ikf.gujarattourism.com ಗೆ ಲಾಗ್ ಆನ್ ಆಗಿ, ಇಲ್ಲವೇ ikf@gujarattourism.com ಇಲ್ಲಿಗೆ ಮೇಲ್ ಮಾಡಿ, ಮಾಹಿತಿ ಪಡೆಯಿರಿ

ಸು೦ದರಬನ್ಸ್ ನಲ್ಲಿ ಹುಲಿ ನೋಡಿ..

ಪಶ್ಚಿಮ ಬಂಗಾಳದ ಸು೦ದರಬನ್ಸ್ ರಾಷ್ಟ್ರೀಯ ಉದ್ಯಾನವಕ್ಕೆ ಭೇಟಿನೀಡಲು ಚಳಿಗಾಲವೇ ಅತ್ಯ೦ತ ಸೂಕ್ತ ಕಾಲ. ಇಲ್ಲಿ ಸಫಾರಿ ಇದೆ. ರಾಜಗಾ೦ಭೀರ್ಯವುಳ್ಳ ಕೆಲವು ವ್ಯಾಘ್ರಗಳನ್ನು ಕಣ್ತು೦ಬಿಕೊಳ್ಳಬಹುದು. ಮುಖ್ಯವಾಗಿ ವ್ಯಾಘ್ರ ರಕ್ಷಿತಾರಣ್ಯವಾಗಿರುವ ಸು೦ದರಬನ್ಸ್ ರಾಷ್ಟ್ರೀಯ ಉದ್ಯಾನವನವು, ಹಾರುವ ತೋಳ, ಕಾಡುಹ೦ದಿ, ಉದ್ದಬಾಲದ ವಾನರ, ಪಾ೦ಗೋಲಿನ್ ನ೦ತಹ ಇನ್ನಿತರ ಸು೦ದರ ಪ್ರಾಣಿಗಳ ಆಶ್ರಯತಾಣವೂ ಹೌದು. ಬ್ಲ್ಯಾಕ್- ಕ್ಯಾಪ್ಡ್ ಕಿ೦ಗ್ ಫಿಷರ್ಸ್, ಪರಿಯಾ ಕೈಟ್ಸ್, ಲಿಟ್ಲ್ ಸ್ಟಿ೦ಟ್ಸ್ ನ೦ತಹ ಅಗಣಿತ ಪಕ್ಷಿ ಪ್ರಭೇದಗಳಿಗೂ ಸು೦ದರಬನ್ಸ್ ಆಶ್ರಯತಾಣವಾಗಿರುವುದರಿ೦ದ, ಪಕ್ಷಿವೀಕ್ಷಣೆಯಲ್ಲಿಯೂ ತೊಡಗಿಕೊಳ್ಳಲು ಇಲ್ಲಿ ಅವಕಾಶವಿದೆ. ಸುಂದರಬನ್ ಸೇರಿದಂತೆ ಪಶ್ಚಿಮ ಬಂಗಾಳದ ವಿವಿಧೆಡೆಗಳಲ್ಲಿರುವ ವನ್ಯಜೀವಿ ಧಾಮಗಳ ಭೇಟಿಯ ಮಾಹಿತಿಗಾಗಿ https://www.northbengalwildanimalspark.in/

ಭರತ್ ಪುರ್ ನಲ್ಲಿ ಪಕ್ಷಿವೀಕ್ಷಣೆ

ರಾಜಸ್ಥಾನದ ಕಿಯೋಲಾಡಿಯೋ ರಾಷ್ಟ್ರೀಯ ಉದ್ಯಾನವನವೆ೦ದೂ ಕರೆಯಲ್ಪಡುವ ಭರತಪುರದಲ್ಲಿ ಅಪರೂಪದ ಪಕ್ಷಿಧಾಮವಿದೆ. ವಿಶೇಷವಾಗಿ ಚಳಿಗಾಲದ ನವೆಂಬರ್ - ಜನವರಿ ಅವಧಿಯಲ್ಲಿ 230 ಕ್ಕೂ ಅಧಿಕ ವಿವಿಧ ಪಕ್ಷಿಪ್ರಬೇಧಗಳ ಪಕ್ಷಿಗಳು ಇಲ್ಲಿಗೆ ಬರುತ್ತವೆ.
ಬುಲ್ ಬುಲ್, ಗ್ರೇಟ್ ಕಾರ್ಮೋರಾ೦ಟ್, ಟಪ್ಟೆಡ್ ಡಕ್, ಗ್ರೀನ್ ಸ್ಯಾ೦ಡ್ ಪೈಪರ್ ಇವೇ ಮೊದಲಾದ ವೈವಿಧ್ಯಮಯ ಸು೦ದರ ಪಕ್ಷಿಗಳನ್ನು ಕ೦ಡುಕೊಳ್ಳಿರಿ. ಚುಕ್ಕೆಗಳುಳ್ಳ ಜಿ೦ಕೆ, ನೀಲಿ ಜಿ೦ಕೆ, ಹೊ೦ಬಣ್ಣದ ನರಿಗಳ೦ತಹ ಪ್ರಾಣಿಗಳನ್ನೂ ನೀವಿಲ್ಲಿ ಕಾಣಬಹುದು. ಪ್ರವಾಸ, ವಸತಿ, ಬುಕ್ಕಿಂಗ್ ಕುರಿತ ಹೆಚ್ಚಿನ ಮಾಹಿತಿ https://www.bharatpursanctury.com/ ಸಂಪರ್ಕಿಸಬಹುದು.

ಗಣಪತಿಫುಲೆ ಕಡಲಕಿನಾರೆ

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿರುವ ಗಣಪತಿಫುಲೆಯು ಒ೦ದು ಪುಟ್ಟ ಹೋಬಳಿ. ಸಹ್ಯಾದ್ರಿ ಬೆಟ್ಟದ ಅಂಚಿನಲ್ಲಿರುವ ಪಶ್ಚಿಮ ಭಾಗದಲ್ಲಿದೆ. ಇಲ್ಲಿ ಸು೦ದರವಾದ ಹಾಗೂ ಸ್ವಚ್ಛ ಕಡಲತಡಿ ಇದೆ ಶುಭ್ರಶ್ವೇತವರ್ಣದ ಉಸುಕು ಹಾಗೂ ತಾಜಾ ನೀಲಜಲರಾಶಿಯು ಈ ಕಡಲತಡಿಯ ವೈಶಿಷ್ಟ್ಯವಾಗಿದೆ.

ಗಣಪತಿಫುಲೆ ಕಡಲಕಿನಾರೆಯಲ್ಲಿ ಬನಾನಾ ಬೋಟಿ೦ಗ್, ವಾಟರ್ ಸ್ಕೂಟರ್ ಗಳ೦ತಹ ಜಲಕ್ರೀಡೆಗಳಿವೆ. ಚಳಿಗಾಲದ ನವೆ೦ಬರ್ ತಿ೦ಗಳಿನಿ೦ದ ಇವು ಆರಂಭವಾಗಿವೆ. ಮಾರ್ಚ್ ವರೆಗೂ ಮುಂದುವರಿಯುತ್ತವೆ. ಗಣಪತಿ ಪುಲೆ ಬೀಚ್ ಸೇರಿದಂತೆ, ಅರಬ್ಬೀಸಮುದ್ರದ ದಂಡೆಯಲ್ಲಿರುವ ಮಹಾರಾಷ್ಟ್ರದ ಕಡಲ ತಡಿಗಳ ಕುರಿತ ಮಾಹಿತಿಗಾಗಿ https://www.maharashtratourism.gov.in/treasures/beaches ಲಿಂಕ್ ಸಂಪರ್ಕಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !