ಬೊಂಬೆಯಾಟವಯ್ಯ....

7

ಬೊಂಬೆಯಾಟವಯ್ಯ....

Published:
Updated:
Deccan Herald

ದಸರಾ ಬೊಂಬೆ ಸಂಭ್ರಮ ಈಗಾಗಲೇ ಆರಂಭವಾಗಿದೆ. ಇನ್ನಷ್ಟು ಬೊಂಬೆಗಳು ಮಳಿಗೆಗಳಲ್ಲಿ ದಾರಿ ಕಾಯುತ್ತಿವೆ. ಪ್ರತಿ ವರ್ಷವೂ ತಮ್ಮ ಬೊಂಬೆ ಸಂಗ್ರಹಕ್ಕೆ ಹೊಸತನ್ನು ಸೇರ್ಪಡೆಗೊಳಿಸುವವರಿಗಾಗಿಯೇ ಈ ವರ್ಷ ಹೊಸ ಬೊಂಬೆಗಳು ಬಂದಿವೆ. ಅದರಲ್ಲಿ ಜಯಲಲಿತಾ ಸಹ ಒಬ್ಬರು. ಸಂಗೀತ ಸಾಮ್ರಾಜ್ಞಿ ಎಂ.ಎಸ್‌. ಸುಬ್ಬುಲಕ್ಷ್ಮಿ ಸಹ ಕಾಯುತ್ತಿದ್ದಾರೆ.

ಉಳಿದಂತೆ ಊಟಕ್ಕೆ ಕುಳಿತವರು, ಕೃಷ್ಣನ ನಾನಾ ರೂಪಗಳು, ರಾಮಾಯಣದ ಕಥೆಗಳು, ಹಳ್ಳಿ ಜೀವನದ ಸೊಗಡು, ಕ್ರಿಕೆಟ್‌ ಆಡುವ ಚಿಣ್ಣರು, ಅಜ್ಜ, ಅಜ್ಜಿಯಂದಿರು ಎಲ್ಲರೂ ಬೊಂಬೆಯ ರೂಪದಲ್ಲಿ ಕಾಯುತ್ತಿದ್ದಾರೆ. ಅದಾರ ಮನೆಯ ಜಗುಲಿಯನ್ನು, ಅಲಂಕರಿಸಲಿದ್ದಾರೊ ಇವರಲ್ಲಿ?

ಪ್ರೀತಿ ಸ್ನೇಹದ ರಾಧಾ ಕೃಷ್ಣನೋ, ಕಳಿಂಗ ಮರ್ದನದ ನಂತರ ಹೆಜ್ಜೆ ಹಾಕುವ ಮುದ್ದು ಕೃಷ್ಣನೋ? ಆಚೆ ಮನೆಯ ಸುಬ್ಬಮ್ಮನನ್ನು ನೆನಪಿಸುವ ಧಡೂತಿ ಅಜ್ಜಿಯೋ? ನಗೆಯುಕ್ಕಿಸುವ ಅಜ್ಜನೋ... ಉಣ್ಣಲು, ಆಡಲು ಸಿದ್ಧರಾಗಿರುವ ಬೊಂಬೆಗಳ ಪಟಾಲಮ್ಮೋ ಯಾರು ಬರಲಿದ್ದಾರೆ ನಿಮ್ಮನೆಗೆ?

ನಗರದ ಮಲ್ಲೇಶ್ವರದಲ್ಲಿ ಕಂಡು ಬಂದ ಮಳಿಗೆಯಲ್ಲಿಯ ಹೊಸತು ಚಿತ್ರಗಳಿವು. ಅಟ್ಟದಂತೆ ಮಜಲುಗಳನ್ನು ಮಾಡಿ, ಪಟ್ಟದ ಗೊಂಬೆಗಳನ್ನು ಕೂರಿಸಿದ ನಂತರ ಅಕ್ಕ, ಪಕ್ಕ ಕೂರಿಸಲು ಹೊಸಹೊಸ ಥೀಮುಗಳನ್ನು ಪರಿಚಯಿಸುವುದು ಹೊಸ ಟ್ರೆಂಡ್‌ ಆಗಿದೆ. ಸಾಂಪ್ರದಾಯಿಕ ಆಚರಣೆಗೆ ಸಮಕಾಲೀನ ಸ್ಪರ್ಶ ನೀಡುವುದರಿಂದಲೇ ತಲೆಮಾರುಗಳವರೆಗೂ ಈ ಆಚರಣೆ ನಡೆದುಕೊಂಡು ಬರುತ್ತದೆ. ಇದನ್ನರಿತವರಂತೆಯೇ ಬೊಂಬೆಗಳ ಮಾರಾಟ ಮಾಡುವವರು ಒಂದೊಂದು ಥೀಮಿಗೂ ಒಂದೊಂದು ಸಂಗ್ರಹವನ್ನೇ ಮಾರಾಟ ಮಾಡುತ್ತಿದ್ದಾರೆ.

ಉಳಿದಂತೆ ನಿಮ್ಮ ಆರಾಧ್ಯ ದೈವಗಳ ವಿವಿಧ ಅವತಾರಗಳು, ಕಣ್ಮನ ಸೆಳೆಯುವ ಬಣ್ಣಗಳಲ್ಲಿ ಮನೆಗೆ ಬಂದು ಕೂರಲಿದ್ದಾರೆ. ಕಣ್ಣುಕೋರೈಸುವ ಬೆಳಕಿನಲ್ಲಿ, ಮಿಣುಕು ದೀಪಗಳಲ್ಲಿ, ಮಿಂಚುತ್ತ, ಮನೆಗೊಂದು ಹೊಸ ಕಳೆ ಕೊಡುವ ಈ ಹಬ್ಬಕ್ಕೆ ಈ ವರ್ಷ ಯಾರನ್ನು ಕರೆತರುವಿರಿ?

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !