ಮಂಗಳವಾರ, ನವೆಂಬರ್ 19, 2019
22 °C

ದುಬಾರಿ ದಂಡ: ಕೇಂದ್ರದ ಗಮನಕ್ಕೆ –ಬಸವರಾಜ ಬೊಮ್ಮಾಯಿ

Published:
Updated:

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ವಿಧಿಸುತ್ತಿರುವುದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿದ್ದು, ಈ ವಿಚಾರವನ್ನು ಕೇಂದ್ರದ ಗಮನಕ್ಕೆ ತರಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

‘ದಂಡದ ಪ್ರಮಾಣವನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ. ಇದು ಯುಪಿಎ ಸರ್ಕಾರದ ಅವಧಿಯಲ್ಲೇ ಪ್ರಸ್ತಾಪವಾಗಿದ್ದು, ಜಂಟಿ ಸದನ ಸಮಿತಿ ಒಪ್ಪಿಗೆ ನೀಡಿದೆ. ಈ ಸಮಿತಿಯಲ್ಲಿ ಇತರ ಪಕ್ಷಗಳ ಸಂಸದರು ಇರುತ್ತಾರೆ. ಹಾಗಾಗಿ ಎಲ್ಲ ಪಕ್ಷದವರ ಅಭಿಪ್ರಾಯ ಪಡೆದ ನಂತರ ಕಾನೂನು ಜಾರಿಯಾಗಿದೆ’ ಎಂದರು. ಯೋಗೇಶ್ ಗೌಡ ಕೊಲೆ ಪ್ರಕರಣವನ್ನು ಸಿಬಿಐಗೆ ಕೊಡಲು ನಿರ್ಧರಿಸಲಾಗಿದ್ದು, ಮುಂದಿನ ಪ್ರಕ್ರಿಯೆಗಳು ನಡೆಯುತ್ತಿವೆ ಎಂದರು.

ಪ್ರತಿಕ್ರಿಯಿಸಿ (+)