ಶುಕ್ರವಾರ, ನವೆಂಬರ್ 22, 2019
27 °C

ಇರಾನ್‌ ಮೇಲಿನ ದಿಗ್ಬಂಧನ ಹೆಚ್ಚಳ : ಅಮೆರಿಕ

Published:
Updated:

ವಾಷಿಂಗ್ಟನ್‌: ಇರಾನ್‌ ಮೇಲೆ ಹೇರಿರುವ ದಿಗ್ಬಂಧನವನ್ನು ಗಣನೀಯವಾಗಿ ಹೆಚ್ಚಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಸೌದಿಯ ತೈಲ ಘಟಕಗಳ ಮೇಲೆ ನಡೆದ ದಾಳಿಯಲ್ಲಿ ಇರಾನ್‌ ಕೈವಾಡ ಇರಬಹುದು ಎಂಬುದಾಗಿ ಅಧಿಕಾರಿಗಳು ಹೇಳಿರುವ ಹಿನ್ನೆಲೆಯಲ್ಲಿ ದಿಗ್ಬಂಧನವನ್ನು ಹೆಚ್ಚಿಸಲು ಅಮೆರಿಕ ನಿರ್ಧರಿಸಿದೆ. 

ದಿಗ್ಬಂಧನವನ್ನು ಹೆಚ್ಚಿಸಲು ಖಜಾನೆ ಕಾರ್ಯದರ್ಶಿಗೆ ತಿಳಿಸಿರುವುದಾಗಿ ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ. ಆದರೆ ತಕ್ಷಣವೇ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬ ವಿವರಗಳನ್ನು ಪ್ರಕಟಿಸಿಲ್ಲ.  

ಪ್ರತಿಕ್ರಿಯಿಸಿ (+)