ಭ್ರಷ್ಟ ಮಾಧ್ಯಮಗಳ ಬದಲಿಗೆ ಟ್ವಿಟರ್‌ ಬಳಸುತ್ತೇನೆ: ಟ್ರಂಪ್‌

ಗುರುವಾರ , ಏಪ್ರಿಲ್ 25, 2019
33 °C

ಭ್ರಷ್ಟ ಮಾಧ್ಯಮಗಳ ಬದಲಿಗೆ ಟ್ವಿಟರ್‌ ಬಳಸುತ್ತೇನೆ: ಟ್ರಂಪ್‌

Published:
Updated:
Prajavani

ವಾಷಿಂಗ್ಟನ್‌: ‘ಜನರ ಬಳಿಗೆ ತಲುಪಲು ಭ್ರಷ್ಟ ಹಾಗೂ ನಕಲಿ ಮಾಧ್ಯಮಗಳನ್ನು ಬಳಸುವ ಬದಲಿಗೆ ಟ್ವಿಟರ್‌ ಅನ್ನು ಹೆಚ್ಚಾಗಿ ಬಳಸುತ್ತೇನೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿದ್ದಾರೆ.

ಶ್ವೇತಭವನದಲ್ಲಿ ಬುಧವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ನನ್ನ ಆಶಯಗಳನ್ನು ವ್ಯಕ್ತಪಡಿಸಲು ಟ್ವಿಟರ್‌ ಸೂಕ್ತ ಮಾಧ್ಯಮವಾಗಿದೆ’ ಎಂದೂ ಹೇಳಿದ್ದಾರೆ.

‘ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ ಸೇರಿದಂತೆ ಐದು ವೇದಿಕೆಗಳಲ್ಲಿ 10 ಕೋಟಿಗಿಂತಲೂ ಹೆಚ್ಚು ಜನರನ್ನು ತಲುಪಲು ನನಗೆ ಸಾಧ್ಯವಾಗಿದೆ. ನನ್ನ ಆಶಯಗಳನ್ನು ಪ್ರಾಮಾಣಿಕವಾಗ ವ್ಯಕ್ತಪಡಿಸಲು ಇವು ಸಹಕಾರಿ’ ಎಂದೂ ಅವರು ಹೇಳಿದ್ದಾರೆ.

ನಕಲಿ ಸುದ್ದಿ ಬಿತ್ತರಿಸುವ ಮೂಲಕ ಮಾಧ್ಯಮಗಳು ಅಪ್ರಮಾಣಿಕತೆ ಪ್ರದರ್ಶಿಸುತ್ತಿವೆ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 7

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !