ಭಾನುವಾರ, ನವೆಂಬರ್ 17, 2019
21 °C

ಶೀಘ್ರದಲ್ಲೇ ಮೋದಿ, ಇಮ್ರಾನ್‌ ಭೇಟಿ: ಟ್ರಂಪ್‌

Published:
Updated:

ವಾಷಿಂಗ್ಟನ್‌: ಪಾಕಿಸ್ತಾನ ಮತ್ತು ಭಾರತದ ಪ್ರಧಾನಿಯನ್ನು ಶೀಘ್ರದಲ್ಲಿಯೇ ಭೇಟಿ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ. 

ಹ್ಯೂಸ್ಟನ್‌ನಲ್ಲಿ ಭಾನುವಾರ ನಡೆಯಲಿರುವ ‘ಹೌದಿ, ಮೋದಿ!’ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಡೊನಾಲ್ಡ್ ಟ್ರಂಪ್‌ ಭೇಟಿಯಾಗಲಿದ್ದಾರೆ.

ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಎಲ್ಲಿ, ಯಾವಾಗ ಭೇಟಿಯಾಗಲಿದ್ದಾರೆ ಎಂಬುದನ್ನು ಟ್ರಂಪ್‌ ಬಹಿರಂಗಪಡಿಸಿಲ್ಲ.

ಮುಂದಿನ ತಿಂಗಳು, ವಿಶ್ವಸಂಸ್ಥೆಯ ಸಾಮಾನ್ಯಸಭೆಯ ಅಧಿವೇಶನದಲ್ಲಿ (ಯುಎನ್‌ಜಿಎ) ಟ್ರಂಪ್‌– ಇಮ್ರಾನ್‌ ಭೇಟಿಯಾಗುವ ಸಂಭವವಿದೆ.

ಪ್ರತಿಕ್ರಿಯಿಸಿ (+)