‘ಕಿಮ್ ಜಾಂಗ್‌ ಬರೆದ ದೊಡ್ಡ ಪತ್ರ ತಲುಪಿದೆ’

7

‘ಕಿಮ್ ಜಾಂಗ್‌ ಬರೆದ ದೊಡ್ಡ ಪತ್ರ ತಲುಪಿದೆ’

Published:
Updated:
Prajavani

ವಾಷಿಂಗ್ಟನ್: ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರಿಂದ ತಮಗೆ ‘ದೊಡ್ಡ ಪತ್ರ’ ಬಂದಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 

ಅಮೆರಿಕ ಹೇರಿರುವ ಆರ್ಥಿಕ ನಿರ್ಬಂಧ ಮುಂದುವರಿಸಿದಲ್ಲಿ, ಉತ್ತರ ಕೊರಿಯಾ ಬೇರೆಯದೇ ಮಾರ್ಗ ಕಂಡುಕೊಳ್ಳಬೇಕಾಗುತ್ತದೆ ಎಂದು ಹೊಸ ವರ್ಷದ ಭಾಷಣದಲ್ಲಿ ಕಿಮ್ ಜಾಂಗ್ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಟ್ರಂಪ್ ಅವರಿಗೆ ಈ ಪತ್ರ ಬಂದಿದೆ. 

‘ಕಿಮ್ ಅವರಿಂದ ಪತ್ರ ಬಂದಿದೆ. ಈಗಲೂ ಅವರೊಂದಿಗೆ ಎರಡನೇ ಬಾರಿ ಮಾತುಕತೆ ನಡೆಸುವ ನಿರೀಕ್ಷೆ ಇದೆ’ ಎಂದು ಟ್ರಂಪ್ ಹೇಳಿದ್ದಾರೆ. ‌

ಅಣ್ವಸ್ತ್ರ ಪರೀಕ್ಷೆ ಕೈಬಿಡುವ ಕುರಿತು ಉಭಯ ನಾಯಕರು ಸಿಂಗಪುರದಲ್ಲಿ ಮಾತುಕತೆ ನಡೆಸಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದನ್ನು ಉಲ್ಲೇಖಿಸಿದ ಟ್ರಂಪ್, ‘ಬಹುಶಃ ನಾವು ಇನ್ನೊಂದು ಸಭೆ ನಡೆಸುತ್ತೇವೆ’ ಎಂದರು. ಜೂನ್‌ನಲ್ಲಿ ನಡೆದಿದ್ದ ಈ ಮಾತುಕತೆಯನ್ನು ಟ್ರಂಪ್ ‘ಪ್ರಮುಖ ರಾಜತಾಂತ್ರಿಕ ಗೆಲುವು’ ಎಂದಿದ್ದರು. ಇದನ್ನು ‍ಪುನರುಚ್ಚರಿಸಿದ ಟ್ರಂಪ್‌, ನಾವು ಮಾತುಕತೆ ನಡೆಸದೇ ಇದ್ದಿದ್ದರೆ ‘ಏಷ್ಯಾದಲ್ಲಿ ದೊಡ್ಡ ಮಟ್ಟದ ಯುದ್ಧವಾಗುತ್ತಿತ್ತು’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 1

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !