ಜೂನ್‌ನಲ್ಲಿ ಜಿ–20 ಶೃಂಗಸಭೆ; ಚೀನಾ, ರಷ್ಯಾ ನಾಯಕರ ಭೇಟಿಗೆ ಟ್ರಂಪ್‌ ಆಸಕ್ತಿ

ಸೋಮವಾರ, ಮೇ 27, 2019
29 °C

ಜೂನ್‌ನಲ್ಲಿ ಜಿ–20 ಶೃಂಗಸಭೆ; ಚೀನಾ, ರಷ್ಯಾ ನಾಯಕರ ಭೇಟಿಗೆ ಟ್ರಂಪ್‌ ಆಸಕ್ತಿ

Published:
Updated:

ವಾಷಿಂಗ್ಟನ್‌: ಅಮೆರಿಕ–ಚೀನಾ ನಡುವೆ ವಾಣಿಜ್ಯ ಬಿಕ್ಕಟ್ಟು ತಾರಕ್ಕೇರುತ್ತಿರುವ ಬೆನ್ನಲೇ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಶೀಘ್ರದಲ್ಲಿಯೇ ಭೇಟಿಯಾಗುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ಹೇಳಿದ್ದಾರೆ. 

ಇದನ್ನೂ ಓದಿ: ಚೀನಾ ಸರಕಿಗೆ ಸುಂಕ ಹೆಚ್ಚಳ ಡೊನಾಲ್ಡ್‌ ಟ್ರಂಪ್‌ ಆದೇಶ

ಇದೇ ಜೂನ್‌ನಲ್ಲಿ ಜಪಾನ್‌ನಲ್ಲಿ ನಿಗದಿಯಾಗಿರುವ ಜಿ–20 ಶೃಂಗಸಭೆಯಲ್ಲಿ ಟ್ರಂಪ್‌ ಚೀನಾ ಮತ್ತು ರಷ್ಯಾದೊಂದಿಗೆ ಮಾತುಕತೆ ನಡೆಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಲೋಕಸಭಾ ಚುನಾವಣೆ ಫಲಿತಾಂಶ ಹೊರಬಂದು ಹೊಸ ಸರ್ಕಾರ ರಚನೆಯೊಂದಿಗೆ ಆಗಷ್ಟೇ ಅಧಿಕಾರವಹಿಸಿರುತ್ತದೆ. ಚುನಾವಣೆ ಬಳಿಕ ಭಾರತದ ಪ್ರಧಾನಿ ಮತ್ತು ಅಮೆರಿಕ ಅಧ್ಯಕ್ಷರ ಭೇಟಿಗೂ ಇದು ಸುಸಮಯವಾಗಲಿದೆ. 

ಜಿ–20 ಶೃಂಗಸಭೆಯ ಹೊರತಾಗಿ ಜಿನ್‌ಪಿಂಗ್‌ ಮತ್ತು ಪುಟಿನ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಮಾತ್ರ ಟ್ರಂಪ್‌ ಮಾಧ್ಯಮ ಸಂವಾದದಲ್ಲಿ ಹೇಳಿದ್ದಾರೆ. ಇನ್ನಾವುದೇ ರಾಷ್ಟ್ರದ ಮುಖಂಡರೊಂದಿಗೆ ನಡೆಸಬಹುದಾದ ಮಾತುಕತೆಯ ಪ್ರಸ್ತಾಪ ಮಾಡಿಲ್ಲ. 

ಇದನ್ನೂ ಓದಿ: ಬಿಡೆನ್‌ ಅಧಿಕಾರಕ್ಕೆ ಬರುವ ಕನಸಲ್ಲಿ ಚೀನಾ ನಿಯಮ ಉಲ್ಲಂಘನೆ: ಟ್ರಂಪ್‌

ಅಮೆರಿಕ ಮತ್ತು ಚೀನಾ ನಡುವೆ ವಾಣಿಜ್ಯ ಬಿಕ್ಕಟ್ಟು ತಲೆ ತೋರಿದ್ದು, ಉಭಯ ರಾಷ್ಟ್ರಗಳು ಸುಂಕ ಹೆಚ್ಚಳದ ಜಟಾಪಟಿಯಲ್ಲಿ ತೊಡಗಿವೆ. ಈ ಕಾರಣದಿಂದಾಗಿ ಜಪಾನ್‌ನಲ್ಲಿ ನಡೆಯಲಿರುವ ಟ್ರಂಪ್‌ ಮತ್ತು ಜಿನ್‌ಪಿಂಗ್‌ ಭೇಟಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಕಳೆದ ನವೆಂಬರ್‌ನಲ್ಲಿ ಅರ್ಜೆಂಟಿನಾದ ಜಿ–20 ಶೃಂಗಸಭೆಯಲ್ಲಿಯೂ ಉಭಯ ನಾಯಕರ ನಡುವೆ ಪ್ರತ್ಯೇಕ ಭೇಟಿ ಏರ್ಪಟ್ಟಿತ್ತು. 

ಫಲಪ್ರದವಾದ ಮಾತುಕತೆ ನಡೆಯಲಿದೆ ಎಂದಿರು ಟ್ರಂಪ್‌, ಸುಂಕ ಹೆಚ್ಚಳವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ’ನಾನು ಅಧ್ಯಕ್ಷನಾಗಿ ಆಯ್ಕೆಯಾಗುವವರೆಗೂ 10 ಸೆಂಟ್‌ಗಳನ್ನೂ ದೇಶ ಪಡೆದಿರಲಿಲ್ಲ. ಆದರೆ, ಈಗ ನಾವು ನೂರಾರು ಬಿಲಿಯನ್‌ (ಸಾವಿರಾರು ಕೋಟಿ) ಡಾಲರ್‌ ಪಡೆಯುತ್ತಿದ್ದೇವೆ. ಇದರೊಂದಿಗೆ ನಾವು ನಿರ್ಧರಿಸಿದರೆ ಇನ್ನೂ 325 ಬಿಲಿಯನ್‌ ಅಮೆರಿಕನ್‌ ಡಾಲರ್‌ಗಳಷ್ಟು ಪಡೆಯುವ ಸಾಧ್ಯತೆಗಳಿವೆ..’ ಎಂದಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !