ಮೂರು ಪ್ರಮುಖ ಹುದ್ದೆಗಳಿಗೆ ಭಾರತೀಯರನ್ನು ನೇಮಿಸಿದ ಟ್ರಂ‍ಪ್

7
ಬುಧವಾರವೇ ಸೆನೆಟ್‌ಗೆ ರವಾನೆ

ಮೂರು ಪ್ರಮುಖ ಹುದ್ದೆಗಳಿಗೆ ಭಾರತೀಯರನ್ನು ನೇಮಿಸಿದ ಟ್ರಂ‍ಪ್

Published:
Updated:
Prajavani

ವಾಷಿಂಗ್ಟನ್‌: ಅಮೆರಿಕ ಸರ್ಕಾರದ ‍ಪ್ರಮುಖ ಆಯಕಟ್ಟಿನ ಸ್ಥಾನಗಳಿಗೆ ಮೂವರು ಭಾರತೀಯ ಮೂಲದವರನ್ನು ನೇಮಿಸಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಆದೇಶ ಹೊರಡಿಸಿದ್ದಾರೆ.

ಪರಮಾಣು ಶಕ್ತಿಯ ಸಹಾಯಕ ಕಾರ್ಯದರ್ಶಿಯಾಗಿ ರಿತಾ ಬರನ್ವಾಲ, ಗೌಪ್ಯತೆ ಹಾಗೂ ಸಿವಿಲ್‌ ಲಿಬರ್ಟಿಸ್‌ ಒವರ್‌ಸೈಟ್‌ ಬೋರ್ಡ್‌ನ ಸದಸ್ಯರಾಗಿ ಆದಿತ್ಯಾ ಬಾಮ್ಜಾಯ್‌ ಹಾಗೂ ಖಜಾನೆ ವಿಭಾಗದ ಸಹಾಯಕ ಕಾರ್ಯದರ್ಶಿಯಾಗಿ ಬಿಮಲ್‌ ಪಟೇಲ್‌ ಅವರನ್ನು ನೇಮಿಸಲಾಗಿದೆ. ಮೂವರ ನೇಮಕಾತಿಯ ಒಪ್ಪಿಗೆಗಾಗಿ ಬುಧವಾರವೇ ಸೆನೆಟ್‌ಗೆ ಕಳುಹಿಸಿಕೊಡಲಾಗಿದೆ. 

ದೇಶದ ಪ್ರಮುಖ ಆಡಳಿತ ಹುದ್ದೆಗಳಿಗೆ ಮೂವತ್ತಕ್ಕೂ ಹೆಚ್ಚು ಭಾರತೀಯ ಮೂಲದವರನ್ನು ಇದುವರೆಗೂ ಟ್ರಂಪ್‌ ನೇಮಕಗೊಳಿಸಿದ್ದಾರೆ.

ಭಾರತ ಮೂಲದ ನಿಕ್ಕಿ ಹ್ಯಾಲೆ ಅವರನ್ನು ಸಂಪುಟ ದರ್ಜೆ ಸ್ಥಾನಮಾನ ಹುದ್ದೆಗೆ, ಮಾಧ್ಯಮ ಉಪ ಕಾರ್ಯದರ್ಶಿಯಾಗಿ ರಾಜ್‌ ಶಾ ಅವರನ್ನು ಈ ಹಿಂದೆ ನೇಮಿಸಲಾಗಿತ್ತು. ಇದೀಗ ಇಬ್ಬರೂ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ರಿತಾ ಬರನ್ವಾಲ ಅವರ ನೇಮಕಾತಿ ಖಚಿತಗೊಂಡರೆ, ಪರಮಾಣು ಇಲಾಖೆ ಅತ್ಯಂತ ಪ್ರಭಾವಿ ಹುದ್ದೆ ವಹಿಸಿದಂತಾಗಲಿದೆ. ಪರಮಾಣು ತಂತ್ರಜ್ಞಾನ ಮತ್ತು ಅಭಿವೃದ್ಧಿ, ಆಡಳಿತ ನಿರ್ವಹಣೆ ವಿಭಾಗದ ಜವಾಬ್ದಾರಿಯನ್ನು ಹೊರಲಿದ್ದಾರೆ. ಈ ಹಿಂದೆ ಅಮೆರಿಕ ನೌಕಾಸೇನೆಯ ಪರಮಾಣು ಇಂಧನ ಮೂಲವಸ್ತುಗಳ ಸಂಶೋಧನೆಯಲ್ಲಿ ತೊಡಗಿದ್ದರು.

ಯಾಲೆ ಪದವೀಧರರಾದ ಆದಿತ್ಯಾ ಬಾಮ್ಜಾಯ್‌ ಅವರು ಫೆಡರಲ್‌, ರಾಷ್ಟ್ರೀಯ ಸುರಕ್ಷತೆ ಕಾನೂನು, ಕಂಪ್ಯೂಟರ್‌ ಅಪರಾಧಗಳ ಕುರಿತಂತೆ ಹಲವು ಲೇಖನಗಳನ್ನು ಬರೆದಿದಿದ್ದಾರೆ. ಅಲ್ಲದೇ, ಮೇಲ್ಮನವಿ ನ್ಯಾಯಾಲಯದ ನ್ಯಾಯಾಧೀಶರಾಗಿ ಕೆಲಸ ಮಾಡಿದ್ದರು.

ಬಿಮಲ್‌ ಪಟೇಲ್‌ ಅವರು ಈ ಹಿಂದೆ ಫೆಡರಲ್‌ ಡೆಪಾಸಿಟ್‌ ಇನ್ಯುರೆನ್ಸ್‌ ಕಾರ್ಪೋರೇಷನ್‌ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅನುಭವ ಹೊಂದಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !