ಇಬ್ಬರು ಅಪ್ಪಂದಿರ ಫಜೀತಿ...!

7

ಇಬ್ಬರು ಅಪ್ಪಂದಿರ ಫಜೀತಿ...!

Published:
Updated:

ಶಿವಮೊಗ್ಗ: ಇಬ್ಬರು ಅಮ್ಮಂದಿರು ಇದ್ದಾರೆ ಎಂದರೆ ಯಾರೂ ತಲೆ ಕೆಡಿಸಿಕೊಳ್ಳಲಾರರು. ಅದೇ, ಇಬ್ಬರು ಅಪ್ಪಂದಿರು ಎಂದರೆ ಹುಬ್ಬೇರಿಸುವವರೇ ಹೆಚ್ಚು. ಒಂದು ಹಂತದಲ್ಲಿ ಇಂತಹ ಮುಜುಗರ ಎದುರಿಸಿದವರು ನಟ, ರಾಜಕಾರಣಿ ‘ಮುಖ್ಯಮಂತ್ರಿ’ ಚಂದ್ರು ಅವರ ಮಕ್ಕಳು.

ವಾಸ್ತವದಲ್ಲಿ ಅವರಿಗೆ ಇಬ್ಬರು ಅಪ್ಪಂದಿರು ಇಲ್ಲ. ಆದರೆ, ತಂದೆಯ ಜನ್ಮ ನಾಮ. ನಂತರ ಬದಲಾದ ಜನಪ್ರಿಯ ಹೆಸರು ಇಂತಹ ಫಜೀತಿಗೆ ಕಾರಣವಾಗಿತ್ತು.

ಚಂದ್ರು ಅವರ ಮೂಲ ಹೆಸರು ಚಂದ್ರಶೇಖರ. 1980ರಲ್ಲಿ ‘ಮುಖ್ಯಮಂತ್ರಿ’ ನಾಟಕದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ನಂತರ ಅವರ ಹೆಸರಿನ ಮುಂದೆ ‘ಮುಖ್ಯಮಂತ್ರಿ’ ಕಾಯಂ ಆಗಿ ಅಂಟಿಕೊಂಡಿತು.

ಮಕ್ಕಳು ಯಾವುದೇ ಅರ್ಜಿ ತುಂಬುವಾಗ ಮುಖ್ಯಮಂತ್ರಿ ಚಂದ್ರು ಎಂದೇ ಬರೆಯುತ್ತಿದ್ದರಂತೆ. ದಾಖಲೆಗಳಲ್ಲಿ ಚಂದ್ರಶೇಖರ ಎಂದು ನಮೂದಾಗಿರುವ ಹೆಸರು ನೋಡಿದವರು, ‘ಇಬ್ಬರು ಅಪ್ಪಂದಿರಾ’ ಎಂದು ಕಿಚಾಯಿಸುತ್ತಿದ್ದರಂತೆ.

ಈ ವಿಷಯವನ್ನು ‘ಮುಖ್ಯಮಂತ್ರಿ ಚಂದ್ರು’ ಅವರೇ ಶಿವಮೊಗ್ಗದಲ್ಲಿ ನಡೆದ ಸಂವಾದಲ್ಲಿ ಪ್ರಸ್ತಾಪಿಸಿದರು. 1998– 99ರಲ್ಲಿ ಜನಪ್ರಿಯ ಹೆಸರಿನ ವಿಷಯ ವಿಧಾನಸಭೆಯಲ್ಲಿ ಚರ್ಚೆಯಾಗಿ ಅದೇ ಹೆಸರು ಬಳಸಲು ಅನುಮತಿಸಿ ಸರ್ಕಾರವೇ ಗೆಜೆಟ್‌ ನೋಟಿಫಿಕೇಷನ್ ಹೊರಡಿಸಿತ್ತಂತೆ. ಅಂದಿನಿಂದ ಎಲ್ಲ ದಾಖಲೆಗಳಲ್ಲೂ ಹೊಸ ಹೆಸರು ನಮೂದಾಗಿ, ಒಂದೇ ಹೆಸರು ಉಳಿದುಕೊಂಡು ‘ಇಬ್ಬರು ಅಪ್ಪಂದಿರ ಸಮಸ್ಯೆ’ಗೆ ಮುಕ್ತಿ ಸಿಕ್ಕಿತಂತೆ.

 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !