ಭಾರತೀಯರ ವಿರುದ್ಧ ವೀಸಾ ದುರ್ಬಳಕೆ ಪ್ರಕರಣ

ಶನಿವಾರ, ಏಪ್ರಿಲ್ 20, 2019
28 °C

ಭಾರತೀಯರ ವಿರುದ್ಧ ವೀಸಾ ದುರ್ಬಳಕೆ ಪ್ರಕರಣ

Published:
Updated:

ನ್ಯೂಯಾರ್ಕ್‌: ಇಬ್ಬರು ಭಾರತೀಯರು ಸೇರಿದಂತೆ ಒಂಬತ್ತು ಮಂದಿಯ ವಿರುದ್ಧ ವೀಸಾ ದುರ್ಬಳಕೆ ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆ ಪ್ರಕರಣದಡಿ ಫೆಡರಲ್‌ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. 

ಸೌರಭ್‌ ಕುಮಾರ್‌ ಪಟೇಲ್‌ ಮತ್ತು ತರಂಗ್‌ ಪಟೇಲ್‌ ಆರೋಪಿಗಳು. ಆರೋಪ ಸಾಬೀತಾದರೆ ದಂಡದ ಜೊತೆಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು.

ಇವರಿಬ್ಬರ ಜೊತೆಗೆ ಏಳು ಪೊಲೀಸ್‌ ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಾಗಿದೆ. 

ಅಪರಾಧ ಚಟುವಟಿಕೆಗಳ ಸಂತ್ರಸ್ತರಿಗೆ ನೀಡುವ ಯು–ವೀಸಾ ಪಡೆಯಲು ಈ ಅಧಿಕಾರಿಗಳು ಆರೋಪಿಗಳಿಗೆ ನಕಲಿ ಪ್ರಮಾಣ ಪತ್ರ ಮತ್ತು ದಾಖಲೆ ಸೃಷ್ಟಿಸಲು ನೆರವಾಗಿದ್ದರು. ಮಾದಕವಸ್ತುಗಳ ಕಳ್ಳಸಾಗಣೆಗೂ ಸಹಕರಿಸಿದ್ದರು ಎನ್ನಲಾಗಿದೆ. 

ಅಧಿಕಾರಿಗಳ ವಿರುದ್ಧದ ಆರೋಪ ಸಾಬೀತಾದರೆ ಅವರನ್ನು ಕೆಲಸದಿಂದ ವಜಾ ಮಾಡಲಾಗುತ್ತದೆ. 

 

 

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !