ಚೀನಾ: ಇಬ್ಬರು ಶಾಲಾ ಮಕ್ಕಳ ಹತ್ಯೆ

ಬುಧವಾರ, ಏಪ್ರಿಲ್ 24, 2019
31 °C

ಚೀನಾ: ಇಬ್ಬರು ಶಾಲಾ ಮಕ್ಕಳ ಹತ್ಯೆ

Published:
Updated:

ಬೀಜಿಂಗ್‌: ಹುನಾನ್ ಪ್ರಾಂತ್ಯದಲ್ಲಿ ಪ್ರಾಥಮಿಕ ಶಾಲೆಯ ಇಬ್ಬರು  ಮಕ್ಕಳನ್ನು ಚಾಕು ಸಾಣೆಹಿಡಿಯುವ ವ್ಯಕ್ತಿ ಬುಧವಾರ ಹತ್ಯೆ ಮಾಡಿದ್ದಾನೆ.

ಘಟನೆಯಲ್ಲಿ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ. 

ಚೀನಾದಲ್ಲಿ ಬಂದೂಕು ಬಳಕೆ ನಿಯಂತ್ರಣಕ್ಕೆ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಚೀನಾದಲ್ಲಿ ಚಾಕು ಮತ್ತು ಕೊಡಲಿಯಿಂದ ದಾಳಿ ನಡೆಸುತ್ತಿರುವವರ ಪ್ರಮಾಣ ಹೆಚ್ಚುತ್ತಿದೆ. ಮುಖ್ಯವಾಗಿ ಮಕ್ಕಳನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗುತ್ತಿದೆ.

ವೈಷಮ್ಯದ ಕಾರಣಕ್ಕೆ ಮತ್ತು ಮಾನಸಿಕ ಅಸ್ವಸ್ಥರು ಇಂತಹ ಕೃತ್ಯ ಎಸಗುತ್ತಿದ್ದಾರೆ ಎನ್ನಲಾಗಿದೆ. 

ಕಳೆದ ತಿಂಗಳು ಚೀನಾದ ಝಾಯ್ಯಾಂಗ್ ನಗರದಲ್ಲಿ, ಜೀವನದಲ್ಲಿ ಹತಾಶಗೊಂಡಿದ್ದ ವ್ಯಕ್ತಿಯೊಬ್ಬ ಪಾದಚಾರಿಗಳ ಮೇಲೆ ಕಾರು ಹರಿಸಿ ಏಳು ಮಂದಿಯನ್ನು ಹತ್ಯೆ ಮಾಡಿದ್ದ.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !