ಬ್ರಾಹ್ಮಿಣಿ ಹಾವು

7
ಮಾಹಿತಿ

ಬ್ರಾಹ್ಮಿಣಿ ಹಾವು

Published:
Updated:
ಬ್ರಾಹ್ಮಣಿ ಹಾವು     –ಚಿತ್ರ: ಸುಗುರೇಶ ಹಿರೇಮಠ

ಎಂಟು – ಹತ್ತು ವರ್ಷಗಳ ಹಿಂದೆ, ರಸ್ತೇಲಿ ಸತ್ತ ಹುಳವೊಂದು ಸಿಕ್ಕಿತ್ತು. ಬಿಸಿಲಿಗೆ ಫಳ ಫಳ ಹೊಳೆಯುತ್ತಿದ್ದ ಅದರ ಹೊಳಪು ಕಂಡು ಆಶ್ಚರ್ಯಪಟ್ಟಿದ್ದೆ. ಯಾವುದೋ ವಿಶಿಷ್ಟ ಎರೆಹುಳ ಅಂತ ಭಾವಿಸಿ, ಒಂದು ಪೇಪರಿನಲ್ಲಿ ಹಾಗೆಯೇ ಸುತ್ತಿಟ್ಟಿದ್ದೆ. ಅದು ಅಲ್ಲಿಯೇ ಒಣಗಿ ಹೋಗಿತ್ತು.

ಮೊನ್ನೆ ನನ್ನ ತಮ್ಮ ಹಾವುಗಳ ಕುರಿತು ಒಂದು (ಗುರುರಾಜ್ ಸನಿಲ್‌ರ ‘ಹಾವು–ನಾವು’) ಪುಸ್ತಕ ತಂದು ಕೊಟ್ಟ. ಅದನ್ನು ಓದಿದ ನಂತರ ಗೊತ್ತಾಗಿದ್ದೇನೆಂದರೆ, ನಾನು ಪೇಪರಿನಲ್ಲಿ ಸುತ್ತಿ ಇಟ್ಟಿದ್ದು ಎರೆಹುಳವಲ್ಲ, ಅದು ಹಾವು ಅಂತ !

ಅದರ ಹೆಸರು ಬ್ರಾಹ್ಮಣಿ ಹುಳಹಾವು, (Worm snake). Typhlops Braminus ಎಂಬುದು ಇದರ ವೈಜ್ಞಾನಿಕ ಹೆಸರು. ‘ಬ್ರಾಹ್ಮಿಣಿ ಹಾವು’, ‘ಕುರುಡು ಹಾವು’ (Blind snake) ಎಂತಲೂ ಕರೆಯುತ್ತಾರೆ.

ಜಗತ್ತಿನಲ್ಲೇ ಅತ್ಯಂತ ಚಿಕ್ಕ ಹಾವು. ಚಿತ್ರ(1)ರಲ್ಲಿರುವ ಬೆರಳನ್ನು ಗಮನಿಸಿ. ಒಣಗಿ ಪೇಪರ್‌ಗೆ ಅಂಟಿಕೊಂಡಿರುವ ಹಾವುಹುಳವನ್ನು ನನ್ನ ಬೆರಳಿನ ಅಳತೆಗೆ ಹೋಲಿಸಿದ್ದೇನೆ. ಭಾರತ ಮತ್ತು ದಕ್ಷಿಣ ಏಷ್ಯಾದ್ಯಂತ ಈ ಹಾವು ಕಂಡು ಬರುತ್ತದೆ. ಗೆದ್ದಲು, ಇರುವೆ ತಿಂದು ಬದುಕುವ ಈ ಹಾವು ಎರೆಹುಳುವಿನಂತೆ ತಂಪಾದ ಪ್ರದೇಶಗಳಲ್ಲಿ ವಾಸಿಸುತ್ತದೆ.

ರಾತ್ರಿ ಮಾತ್ರ ಸಂಚರಿಸುವ ಇದು, ಅಕಸ್ಮಾತ್ ಹಗಲೇನಾದರೂ ಹೊರಬಂದರೆ, ಬಿಸಿಲಿನ ತಾಪ ತಾಳದೆ ಸತ್ತು ಹೋಗುತ್ತದೆ. ನನಗೆ ಸಿಕ್ಕಿರುವುದೂ ಹೀಗೆ ಸತ್ತ ಹಾವೇ. ಅದು ಈಗಲೂ ನನ್ನ ಬಳಿ ಇದೆ.

ಸಾಮಾನ್ಯವಾಗಿ 9 ರಿಂದ 20 ಸೆಂ.ಮೀ ಉದ್ದ ಬೆಳೆಯುವ ಈ ಹಾವುಗಳು, ಏಪ್ರಿಲ್‌ನಿಂದ ಜುಲೈ ನಡುವೆ ಅಕ್ಕಿ ಗಾತ್ರದ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ.

ಈ ಬ್ರಾಹ್ಮಿಣಿ ಹಾವಿನ ಕುರಿತು ಆಶ್ಚರ್ಯಕರ ಸಂಗತಿ ಎಂದರೆ, ಇವುಗಳಲ್ಲಿ ಗಂಡು ಸಂತತಿಯೇ ಇಲ್ಲ. ಇರುವುದು ಹೆಣ್ಣು ಹಾವುಗಳು ಮಾತ್ರ. ಇವು 'ಸ್ವಫಲೀಕೃತ' ವಿಧಾನದಿಂದ ಮೊಟ್ಟೆ ಇಟ್ಟು ಮರಿ ಮಾಡುತ್ತವೆ!

ಅಂದಹಾಗೆ ಇವು ವಿಷಕಾರಿ ಹಾವುಗಳಲ್ಲ..

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !