ಯುಎಇ: ಕಾರ್ಮಿಕರ ವಾಪಸಾತಿ ವೀಸಾ ಯೋಜನೆ

7

ಯುಎಇ: ಕಾರ್ಮಿಕರ ವಾಪಸಾತಿ ವೀಸಾ ಯೋಜನೆ

Published:
Updated:

ದುಬೈ: ಯಾವುದೇ ಅಧಿಕೃತ ದಾಖಲೆ ಇಲ್ಲದೆ, ಅವಧಿ ಮೀರಿ ದೇಶದಲ್ಲಿ ನೆಲೆಸಿರುವ ವಿದೇಶಗಳ ಕಾರ್ಮಿಕರಿಗೆ ಶಿಕ್ಷೆ ಅಥವಾ ದಂಡ ವಿಧಿಸದೇ ಅವರನ್ನು ವಾಪಸ್ ಕಳುಹಿಸುವ ವೀಸಾ ಕಾರ್ಯಕ್ರಮವನ್ನು ಯುಎಇ ಬುಧವಾರ ಪ್ರಕಟಿಸಿದೆ. ಮಾನ್ಯತೆ ಇರುವ ವೀಸಾ ನೀಡಿ ಕಾರ್ಮಿಕರನ್ನು ಅವರವರ ದೇಶಗಳಿಗೆ ಕಳಿಹಿಸಲಾಗುತ್ತದೆ. 

ಯುಎಇಯಲ್ಲಿ ಭಾರತದ 28 ಲಕ್ಷ ವಲಸಿಗರು ನೆಲೆಸಿದ್ದಾರೆ. ಈ ಪೈಕಿ ವೃತ್ತಿರರ ಸಂಖ್ಯೆ ಶೇ 15. ವೃತ್ತಿಪರರಲ್ಲದವರ ಸಂಖ್ಯೆ ಶೇ 20. ಉಳಿದ ಶೇ 65ರಷ್ಟು ಮಂದಿ ಕಾರ್ಮಿಕರು. 

ಇಲ್ಲಿರುವ ವಿದೇಶಿ ವಲಸಿಗರ ಅಧಿಕೃತ ಸಂಖ್ಯೆಯನ್ನು ಬಿಡುಗಡೆ ಮಾಡಿಲ್ಲ. ಆದರೆ ಭಾರತ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ ಹಾಗೂ ಫಿಲಿಪ್ಪೀನ್ಸ್‌ನ ಸಾವಿರಾರು ಕಾರ್ಮಿಕರು ಯುಎಇ ಪ್ರಕಟಿಸಿರುವ ಮಾನವೀಯ ನೆಲೆಯಲ್ಲಿ ಸ್ವದೇಶಗಳಿಗೆ ವಾಪಸಾಗುವ ಯೋಜನೆಯ ಲಾಭ ಪಡೆಯಲಿದ್ದಾರೆ. ಈ ಯೋಜನೆ ಅಕ್ಟೋಬರ್ 31ಕ್ಕೆ ಕೊನೆಯಾಗಲಿದೆ. 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !