ಭಾರತೀಯನ ಹತ್ಯೆ: ತನಿಖೆಗೆ ಚಾಲನೆ

ಶುಕ್ರವಾರ, ಮೇ 24, 2019
23 °C

ಭಾರತೀಯನ ಹತ್ಯೆ: ತನಿಖೆಗೆ ಚಾಲನೆ

Published:
Updated:

ಲಂಡನ್‌: ಹೈದರಾಬಾದ್‌ನ ಮೊಹಮ್ಮದ್‌ ನದೀಮ್‌ಉದ್ದೀನ್‌ (24) ಅವರ ಹತ್ಯೆಯ ತನಿಖೆಯನ್ನು ಇಲ್ಲಿನ ಥಾಮ್ಸ್‌ ವ್ಯಾಲಿ ಪೊಲೀಸರು ಕೈಗೆತ್ತಿಕೊಂಡಿದ್ದಾರೆ. ಇಲ್ಲಿನ ಸೂಪರ್‌ ಮಾರ್ಕೆಟ್‌ನ ಪಾರ್ಕಿಂಗ್‌ ಜಾಗದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಬುಧವಾರ ಅವರು ಪತ್ತೆಯಾಗಿದ್ದರು.

‌‘ತನಿಖೆ ಪ್ರಗತಿಯಲ್ಲಿದೆ. ಸೂಪರ್‌ ಮಾರ್ಕೆಟ್‌ನ ಸುತ್ತಮುತ್ತ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಈ ಕೃತ್ಯದ ಕಾರಣ ಹಾಗೂ ಇದರ ಹಿಂದೆ ಇರುವವರನ್ನು ಪತ್ತೆಹಚ್ಚಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರ ಕುಟುಂಬ ಲಂಡನ್‌ಗೆ ತೆರಳ ಬಯಸಿದ್ದು, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರ ಸಹಾಯ ಕೋರಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !