ಮಂಗಳವಾರ, ನವೆಂಬರ್ 12, 2019
28 °C

‘ಕಾಶ್ಮೀರದ ಜನರ ಹಕ್ಕು ಗೌರವಿಸಿ’

Published:
Updated:
Prajavani

ಜಿನೀವಾ: ಭಾರತ ಮತ್ತು ಪಾಕಿಸ್ತಾನ, ಕಾಶ್ಮೀರದ ಜನರ ಮಾನವ ಹಕ್ಕುಗಳನ್ನು ಗೌರವಿಸಬೇಕು ಮತ್ತು ರಕ್ಷಿಸಬೇಕು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಅಂಗದ ಮುಖ್ಯಸ್ಥೆ ಮಿಶೆಲ್ ಬ್ಯಾಚೆಲೆಟ್ ಸೋಮವಾರ ಹೇಳಿದ್ದಾರೆ.

‘370ನೇ ವಿಧಿ ರದ್ದುಪಡಿಸಿದ ನಂತರ ಭಾರತ–ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯ ಎರಡೂ ಬದಿಯಲ್ಲಿನ ಜನರ ಮಾನವ ಹಕ್ಕುಗಳ ಸ್ಥಿತಿ ಕುರಿತು ನಮ್ಮ ಕಚೇರಿಗೆ ನಿರಂತರವಾಗಿ ವರದಿಗಳು ಬರುತ್ತಿವೆ’ ಎಂದು ಅವರು ತಿಳಿಸಿದ್ದಾರೆ.

‘ಕಾಶ್ಮೀರದಲ್ಲಿ ಹೇರಲಾಗಿರುವ ನಿರ್ಬಂಧ ತೆರವುಗೊಳಿಸುವಂತೆ ಹಾಗೂ ವಶಕ್ಕೆ ಪಡೆದಿರುವ ಸ್ಥಳೀಯ ರಾಜಕೀಯ ನಾಯಕರು ಮತ್ತು ಚಳವಳಿಗಾರರ ಹಕ್ಕುಗಳನ್ನು ಗೌರವಿಸುವಂತೆ ಭಾರತಕ್ಕೆ ಮನವಿ ಮಾಡಿದ್ದೇನೆ’ ಎಂದರು.

ಪ್ರತಿಕ್ರಿಯಿಸಿ (+)