ಈ ಬಾರಿ ಎಲ್‌ ನಿನೊ ಸಾಧ್ಯತೆ ಶೇ 70ರಷ್ಟು: ವಿಶ್ವಸಂಸ್ಥೆ

7

ಈ ಬಾರಿ ಎಲ್‌ ನಿನೊ ಸಾಧ್ಯತೆ ಶೇ 70ರಷ್ಟು: ವಿಶ್ವಸಂಸ್ಥೆ

Published:
Updated:

ಜಿನೇವಾ: ಜಾಗತಿಕ ತಾಪಮಾನದ ಮೇಲೆ ಪ್ರಭಾವ ಬೀರುವ ಎಲ್‌–ನಿನೊ ವಿದ್ಯಮಾನ ಉಂಟಾಗುವ ಸಾಧ್ಯತೆ ಈ ಬಾರಿ ಶೇ 70ರಷ್ಟಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಈ ವರ್ಷಾಂತ್ಯದ ವೇಳೆಗೆ ಎಲ್‌–ನಿನೊ ವಿದ್ಯಮಾನ ಜರುಗುವ ಸಾಧ್ಯತೆಯಿದೆ. 

ಜಾಗತಿಕ ಹವಾಮಾನ ಮುನ್ಸೂಚನಾ ಸಂಸ್ಥೆ‌ ಪ್ರಕಾರ, ಪೆಸಿಫಿಕ್‌ ಸಾಗರದ ಪೂರ್ವಭಾಗದಲ್ಲಿ ನಿಯಮಿತವಾಗಿ ಉಷ್ಣಾಂಶ ಹೆಚ್ಚಾಗಿದ್ದು, ಇದು ಎಲ್‌–ನಿನೊ ಉಂಟಾಗುವಿಕೆಗೆ ಕಾರಣವಾಗಿದೆ. ಇದರ ಪ್ರಭಾವದಿಂದ ಕೆಲವು ಪ್ರದೇಶದಲ್ಲಿ ಬರಪರಿಸ್ಥಿತಿ ತಲೆದೋರಿದರೆ, ಇನ್ನು ಕೆಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.

2015–2016ರಲ್ಲಿ ಇದ್ದಷ್ಟು ಪ್ರಭಾವವನ್ನು ಎಲ್‌–ನಿನೊ ಈ ಬಾರಿ ಹೊಂದಿಲ್ಲ. ಆದರೂ, ಗಮನಾರ್ಹ ಪರಿಣಾಮ ಬೀರಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಏಷ್ಯಾ–ಪೆಸಿಫಿಕ್‌ ಭಾಗ, ಯುರೋಪ್‌, ಉತ್ತರ‍ ಅಮೆರಿಕ, ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕದ ಕರಾವಳಿ ಭಾಗದ ಮೇಲ್ಮೈನಲ್ಲಿ ತಾಪಮಾನ ಏರಿಕೆಯಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !