ಗುರುವಾರ , ನವೆಂಬರ್ 14, 2019
18 °C

ಆರೈಕೆ ಕೊರತೆಯಿಂದ ಮಕ್ಕಳಲ್ಲಿ ಅನಾರೋಗ್ಯ: ವಿಶ್ವ ಮಕ್ಕಳ ವರದಿ ಬಿಡುಗಡೆ

Published:
Updated:
Prajavani

ಪ್ಯಾರಿಸ್: ಐದು ವರ್ಷದೊಳಗಿನ ವಿಶ್ವದ 70 ಕೋಟಿ ಮಕ್ಕಳಲ್ಲಿ ಮೂರನೇ ಒಂದರಷ್ಟು ಮಕ್ಕಳು ಅಧಿಕ ತೂಕ ಅಥವಾ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಯುನಿಸೆಫ್‌ ಹೇಳಿದೆ. 

‘ವಿಶ್ವ ಮಕ್ಕಳ ವರದಿ’ಯನ್ನು ಬಿಡುಗಡೆ ಮಾಡಿರುವ ಯುನಿಸೆಫ್‌, ಭವಿಷ್ಯದಲ್ಲಿ ಮಕ್ಕಳ ಆರೋಗ್ಯಕ್ಕೆ ಸವಾಲಾಗಿರುವ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದೆ. 

‘ಮಕ್ಕಳು ಆಹಾರ ಸೇವನೆ ಸರಿಯಾಗಿ ಮಾಡದಿದ್ದರೆ, ಆರೋಗ್ಯವಾಗಿ ಇರಲಾರರು’ ಎಂದು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿ ಹೆನ್ರಿಯೇಟಾ ಫೋರ್ ಹೇಳಿದ್ದಾರೆ. 

ಆರೈಕೆ ಕೊರತೆ: ಹುಟ್ಟಿದ ಮೊದಲ 1000 ದಿನಗಳು ಮಗುವಿನ ಭವಿಷ್ಯದ ಆರೋಗ್ಯವನ್ನು ನಿರ್ಧರಿಸಲಿದೆ. ಐವರು ಮಹಿಳೆಯರಲ್ಲಿ ಇಬ್ಬರು ಮಾತ್ರ ತಮ್ಮ ಮಕ್ಕಳಿಗೆ ಮೊದಲ ಆರು ತಿಂಗಳು ಸರಿಯಾಗಿ ಎದೆಹಾಲನ್ನು ನೀಡುತ್ತಿದ್ದಾರೆ ಎಂದು ವರದಿ ಹೇಳಿದೆ. 

ಹೊಸ ಮಾದರಿಯ ಅಪೌಷ್ಟಿಕತೆ ಮಕ್ಕಳಲ್ಲಿ ಕಾಣಿಸಿಕೊಂಡಿದ್ದು, ಮಕ್ಕಳು ಹಸಿವಿನಿಂದ ಇದ್ದರೂ ಅದರ ಅನುಭವ ಮಕ್ಕಳಿಗೆ ಆಗುತ್ತಿಲ್ಲ. ಇದನ್ನು ಯುನಿಸೆಫ್‌ ‘ತೋರ್ಗೊಡದ ಹಸಿವು’ (ಹಿಡನ್ ಹಂಗರ್‌) ಎಂದು ಹೆಸರಿಸಿದೆ. ಇನ್ನು ಕೆಲವು ಮಕ್ಕಳು ಅಧಿಕತೂಕದಿಂದ ಬಳಲುತ್ತಿದ್ದಾರೆ.  ಅಪೌಷ್ಟಿಕತೆ, ಬೊಜ್ಜು, ಪೌಷ್ಟಿಕ ಆಹಾರಗಳ ಕುರಿತು ಪೋಷಕರಲ್ಲಿರುವ ಅಜ್ಞಾನವು ಮಕ್ಕಳನ್ನು ತೊಂದರೆಗೆ ದೂಡಿದೆ ಎಂದಿದೆ.

ಅಂಕಿ ಅಂಶ
14.9 ಕೋಟಿ: ಬೆಳವಣಿಗೆ ಕೊರತೆ ಎದುರಿಸುತ್ತಿರುವ ಮಕ್ಕಳು
5 ಕೋಟಿ: ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು 
ಶೇ 40: 1990–2015ರಲ್ಲಿ ನಿರ್ಮೂಲನೆಗೊಂಡ ಬಡತನ
80 ಕೋಟಿ: ಹಸಿವಿನಿಂದ ಬಳಲುತ್ತಿರುವ ಜನರು
200 ಕೋಟಿ: ಮಿತಿ ಮೀರಿ ಮತ್ತು ತಪ್ಪು ಆಹಾರ ಸೇವಿಸುತ್ತಿರುವ ಜನರು

ಪ್ರತಿಕ್ರಿಯಿಸಿ (+)