ಕಪ್ಪುಪಟ್ಟಿಗೆ ಲಾಡೆನ್‌ ಪುತ್ರ ಹಮ್ಝಾ

ಶನಿವಾರ, ಏಪ್ರಿಲ್ 20, 2019
29 °C
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕ್ರಮ

ಕಪ್ಪುಪಟ್ಟಿಗೆ ಲಾಡೆನ್‌ ಪುತ್ರ ಹಮ್ಝಾ

Published:
Updated:

ವಿಶ್ವಸಂಸ್ಥೆ: ಭಯೋತ್ಪಾದಕ ಸಂಘಟನೆ ಅಲ್‌ಖೈದಾ ಮುಖಂಡ ಒಸಾಮ ಬಿನ್‌ ಲಾಡೆನ್‌ ಪುತ್ರ ಹಮ್ಝಾ ಬಿನ್‌ ಲಾಡೆನ್‌ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧ ಸಮಿತಿ ಕಪ್ಪು ಪಟ್ಟಿಗೆ ಸೇರಿಸಿದೆ.

29 ವರ್ಷದ ಹಮ್ಝಾ, ಅಲ್‌ಖೈದಾ ಸಂಘಟನೆಯ ಸದ್ಯದ ಮುಖ್ಯಸ್ಥ ಐಮನ್‌ ಅಲ್‌ ಝವಾಹಿರಿ ಉತ್ತರಾಧಿಕಾರಿಯಾಗುವ ಸಾಧ್ಯತೆ ಹೆಚ್ಚಿದೆ. ಹಮ್ಝಾಗೆ ಪ್ರವಾಸ ಕೈಗೊಳ್ಳಲು ನಿರ್ಬಂಧಿಸಲಾಗಿದೆ.

ಜತೆಗೆ ಈತನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಶಸ್ತ್ರಾಸ್ತ್ರಗಳನ್ನು ಬಳಸುವುದನ್ನು ನಿರ್ಬಂಧಿಸಲಾಗಿದೆ.

ಹಮ್ಝಾಗೆ ಸೇರಿದ ಆಸ್ತಿಗಳನ್ನು ಆಯಾ ರಾಷ್ಟ್ರಗಳು ಮುಟ್ಟುಗೋಲು ಹಾಕಿಕೊಳ್ಳಬೇಕು. ಆತನಿಗೆ ಯಾವುದೇ ಧನ ಸಹಾಯ ಮಾಡುವಂತಿಲ್ಲ. ಯಾವುದೇ ದೇಶಕ್ಕೂ ಹೋಗುವಂತಿಲ್ಲ ಎಂದು ಹೇಳಲಾಗಿದೆ.

ಹಮ್ಝಾ ಕುರಿತು ಮಾಹಿತಿ ನೀಡುವವರಿಗೆ ₹7 ಕೋಟಿ (10 ಲಕ್ಷ ಡಾಲರ್‌) ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದ ಬೆನ್ನಲ್ಲೇ, ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಬಂಧ ಸಮಿತಿ, ಈತನನ್ನು ಕಪ್ಪು ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿದೆ.

‘ಹಮ್ಝಾ ಅಲ್‌ಖೈದಾ ಸಂಘಟನೆಯ ಅಧಿಕೃತ ಸದಸ್ಯ ಎಂದು ಅಲ್‌ ಝವಾಹಿರಿ ಈಗಾಗಲೇ ಘೋಷಿಸಿದ್ದಾರೆ’ ಎಂದು ಭದ್ರತಾ ಮಂಡಳಿಯ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !