ಪ್ರಜಾಕೀಯ ಆರಂಭವಾಗಲಿ: ಉಪೇಂದ್ರ

ಶುಕ್ರವಾರ, ಏಪ್ರಿಲ್ 26, 2019
21 °C

ಪ್ರಜಾಕೀಯ ಆರಂಭವಾಗಲಿ: ಉಪೇಂದ್ರ

Published:
Updated:
Prajavani

ವಿಜಯಪುರ: ‘ರಾಜ ಪ್ರಭುತ್ವ ಕೊನೆಗೊಂಡರೂ; ‘ರಾಜ’ ಅಂತ್ಯಗೊಳ್ಳುತ್ತಿಲ್ಲ. ಪ್ರಜಾಪ್ರಭುತ್ವ, ಪ್ರಜಾಕೀಯ, ಪ್ರಜಾಕಾರಣ ಇಂದಿನ ಸಮಾಜಕ್ಕೆ ಬೇಕಿದೆ’ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಅಧ್ಯಕ್ಷ, ಚಲನಚಿತ್ರ ನಟ ಉಪೇಂದ್ರ ಹೇಳಿದರು.

‘ರಾಜಕಾರಣ ಎಂಬುದು ಇದೀಗ ಉದ್ಯಮವಾಗಿದೆ. ಅದರ ಬಗ್ಗೆ ಟೀಕೆ ಬೇಕಿಲ್ಲ. ಜನರ ನಿರ್ಧಾರವೇ ಅಂತಿಮವಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆ ತರಬೇಕಿದೆ. ನಾವು ಆಯ್ಕೆ ಮಾಡಿದ ಶಾಸಕ, ಸಂಸದ ಸರಿ ಇಲ್ಲ ಎಂದರೇ ಆತನ ಅಧಿಕಾರ ವಾಪಸ್‌ ಪಡೆಯುವುದನ್ನು ಜನರಿಗೆ ನೀಡುವ ಚಿಂತನೆ ಪ್ರಜಾಕೀಯದ್ದು’ ಎಂದು ಶುಕ್ರವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬಳ್ಳಾರಿಯಲ್ಲಿ ಸೂಕ್ತ ಅಭ್ಯರ್ಥಿ ಸಿಗಲಿಲ್ಲ ಎಂದು ಪಕ್ಷದಿಂದ ಅಭ್ಯರ್ಥಿ ನಿಲ್ಲಿಸಿಲ್ಲ. 27 ಕ್ಷೇತ್ರಗಳಲ್ಲೂ ಸ್ಪರ್ಧಿಸಿದ್ದೇವೆ. ಶಾಸಕ, ಸಂಸದರಾಗಿ ಆಯ್ಕೆಯಾದವರು ನಮ್ಮ ಸೇವಕರು. ಸೇವೆ ಮಾಡಲಿಕ್ಕಾಗಿಯೇ ನಾವು ಅವರಿಗೆ ಸಂಬಳ ಕೊಡುತ್ತಿದ್ದೇವೆ. ಅದಕ್ಕಾಗಿಯೇ ಪ್ರಜಾಕೀಯ ಪಕ್ಷ ಈಗಲೇ ಅಭ್ಯರ್ಥಿಗಳಿಗೆ ಸಮವಸ್ತ್ರ ನೀಡಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವೆ. ಆಗ ಖಾಕಿ ಸಮವಸ್ತ್ರ ಧರಿಸುವೆ’ ಎಂದು ಉಪೇಂದ್ರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಜನರ ಸೇವೆ ಮಾಡಲಿಕ್ಕಾಗಿ ಪ್ರಜಾಕೀಯಕ್ಕೆ ಬಂದಿರುವೆ. ಅವಕಾಶ ಸಿಕ್ಕರೆ ಕೆಲಸ ಮಾಡುವೆ. ಇಲ್ಲದಿದ್ದರೆ ಸಿನಿಮಾ ರಂಗಕ್ಕೆ ತೆರಳುವೆ. ಮತ್ತೆ ಚುನಾವಣೆ ಬಂದಾಗ ಬರುವೆ. ಆದರೆ ಪ್ರಜಾಕೀಯದ ಪ್ರಚಾರ–ವಿಚಾರ ನಿರಂತರವಾಗಿರಲಿದೆ. ನಮಗೆ ಬೇರೊಂದು ಆದರ್ಶ ಬೇಕಿಲ್ಲ. ನಾವೇ ದೇಶಕ್ಕೆ ಮಾದರಿಯಾಗುವ ಯತ್ನ ಆರಂಭಿಸಿದ್ದೇವೆ. ಚುನಾವಣಾ ಫಲಿತಾಂಶ ಬಂದಾಗ ಎಷ್ಟು ಮತ ನಮಗೆ ಸಿಕ್ಕಿವೆ ಎಂಬುದರ ಮೇಲೆ ಎಲ್ಲವೂ ನಿರ್ಧರಿತಗೊಳ್ಳಲಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪಕ್ಷದ ಅಭ್ಯರ್ಥಿ ಗುರುಬಸವ ಪ.ರಬಕವಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !