ಅಮೆರಿಕದ ‘ಶೂನ್ಯ ಆಮದು ತೆರಿಗೆ’ ವ್ಯಾಪ್ತಿಯಿಂದ ಭಾರತ ಹೊರಕ್ಕೆ?

ಮಂಗಳವಾರ, ಮಾರ್ಚ್ 26, 2019
31 °C
ಹೇಳಿಕೆ ಬಿಡುಗಡೆ ಮಾಡಿದ ಅಮೆರಿಕ ಸರ್ಕಾರ

ಅಮೆರಿಕದ ‘ಶೂನ್ಯ ಆಮದು ತೆರಿಗೆ’ ವ್ಯಾಪ್ತಿಯಿಂದ ಭಾರತ ಹೊರಕ್ಕೆ?

Published:
Updated:

ವಾಷಿಂಗ್ಟನ್: ಭಾರತದ ನಿಗದಿತ ಮೊತ್ತದ ಉತ್ಪನ್ನಗಳಿಗೆ ನೀಡಿರುವ ‘ಶೂನ್ಯ ಆಮದು ತೆರಿಗೆ’ ಪ್ರಯೋಜನವನ್ನು ಹಿಂಪಡೆಯಲು ಉದ್ದೇಶಿಸಿರುವುದಾಗಿ ಅಮೆರಿಕ ಮಂಗಳವಾರ ಘೋಷಿಸಿದೆ.

ಸಾರ್ವತ್ರಿಕ ಆದ್ಯತೆ ವ್ಯವಸ್ಥೆ (ಜನರಲೈಸ್ಡ್ ಸಿಸ್ಟಂ ಆಫ್ ಪ್ರಿಫರೆನ್ಸಸ್/ ಜಿಎಸ್‌ಪಿ) ಅನ್ವಯ ಭಾರತಕ್ಕೆ ನೀಡಲಾಗಿರುವ ವಿನಾಯಿತಿ ಇದಾಗಿದೆ. ಇದರ ಅನ್ವಯ ಸದ್ಯ ಭಾರತದ 5.6 ಶತಕೋಟಿ ಡಾಲರ್ ಮೊತ್ತದ ಉತ್ಪನ್ನಗಳನ್ನು ಅಮೆರಿಕಕ್ಕೆ ಸುಂಕರಹಿತವಾಗಿ ಮಾರಾಟ ಮಾಡಬಹುದಾಗಿದೆ.

‘ನಮ್ಮ ಉತ್ಪನ್ನಗಳಿಗೆ ನ್ಯಾಯಸಮ್ಮತವಾದ ಮತ್ತು ಸಮಂಜಸವಾದ ಮಾರುಕಟ್ಟೆಯನ್ನ ಕಲ್ಪಿಸುವ ಬಗ್ಗೆ ಭಾರತ ಭರವಸೆ ನೀಡುತ್ತಿಲ್ಲ. ಹೀಗಾಗಿ ಭಾರತಕ್ಕೆ ಜಿಎಸ್‌ಪಿ ಅನ್ವಯ ನೀಡಿರುವ ಸ್ಥಾನಮಾನವನ್ನು ಹಿಂಪಡೆಯಲು ಉದ್ದೇಶಿಸಿದ್ದೇನೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅಲ್ಲಿನ ಸ್ಪೀಕರ್‌ಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಅಮೆರಿಕ ಸರ್ಕಾರ ಘೋಷಣೆ ಹೊರಡಿಸಿದೆ.

‘ಅಭಿವೃದ್ಧಿ ಹೊಂದುತ್ತಿರುವ ಭಾರತ ಮತ್ತು ಟರ್ಕಿಗೆ ಜಿಎಸ್‌ಪಿ ಅನ್ವಯ ನೀಡಿರುವ ವಿನಾಯಿತಿಯನ್ನು ಅಧ್ಯಕ್ಷ ಟ್ರಂಪ್ ಅವರ ನಿರ್ದೇಶನದ ಅನುಸಾರ ಹಿಂಪಡೆಯಲು ಉದ್ದೇಶಿಸಲಾಗಿದೆ. ಯಾಕೆಂದರೆ ಅವರು ಶಾಸನಬದ್ಧ ಅರ್ಹತಾ ಮಾನದಂಡವನ್ನು ಪಾಲಿಸುತ್ತಿಲ್ಲ’ ಎಂದು ಅಮೆರಿಕದ ವಹಿವಾಟು ಪ್ರತಿನಿಧಿ ರಾಬರ್ಟ್‌ ಲೈಟೈಜರ್ ಹೇಳಿಕೆಯನ್ನು ಉಲ್ಲೇಖಿಸಿ ಅಲ್ಲಿನ ಸರ್ಕಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ಭಾರತಕ್ಕೆ ಶೂನ್ಯ ಆಮದು ತೆರಿಗೆ ಪ್ರಯೋಜನ ಮುಂದುವರಿಸಬೇಕೇ ಎಂಬ ಬಗ್ಗೆ ಅಮೆರಿಕ ಸರ್ಕಾರ 2018ರ ಏಪ್ರಿಲ್‌ನಲ್ಲೇ ಅರ್ಹತಾ ಪರಾಮರ್ಶೆ ಆರಂಭಿಸಿತ್ತು ಎನ್ನಲಾಗಿದೆ.

‘ಅಮೆರಿಕದ ವಾಣಿಜ್ಯ ವ್ಯವಹಾರಗಳ ಮೇಲೆ ಗಂಭೀರ ಋಣಾತ್ಮಕ ಪರಿಣಾಮ ಬೀರುವಂತಹ ಅನೇಕ ಕ್ರಮಗಳನ್ನು ಭಾರತ ಜಾರಿ ಮಾಡಿದೆ. ಜಿಎಸ್‌ಪಿ ಮಾನದಂಡಗಳನ್ನು ಪಾಲಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಭಾರತ ವಿಫಲವಾಗಿದೆ’ ಎಂದೂ ಅಮೆರಿಕದ ಹೇಳಿಕೆಯಲ್ಲಿ ಉಲ್ಲೇಖವಾಗಿದೆ.


ಪತ್ರಿಕಾ ಹೇಳಿಕೆ

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 2

  Frustrated
 • 13

  Angry

Comments:

0 comments

Write the first review for this !