ಇಸ್ಲಾಮಿಕ್‌ ಸ್ಟೇಟ್‌ ವಿರುದ್ಧ ಗೆಲುವು: ಅಮೆರಿಕ ಬೆಂಬಲಿತ ಸಿರಿಯಾ ಪಡೆಗಳ ಘೋಷಣೆ

ಗುರುವಾರ , ಏಪ್ರಿಲ್ 25, 2019
26 °C

ಇಸ್ಲಾಮಿಕ್‌ ಸ್ಟೇಟ್‌ ವಿರುದ್ಧ ಗೆಲುವು: ಅಮೆರಿಕ ಬೆಂಬಲಿತ ಸಿರಿಯಾ ಪಡೆಗಳ ಘೋಷಣೆ

Published:
Updated:
Prajavani

ಬಗೌಜ್‌: ಇಸ್ಲಾಮಿಕ್‌ ಸ್ಟೇಟ್‌ ಹಿಡಿತದಲ್ಲಿದ್ದ ಪೂರ್ವ ಸಿರಿಯಾದ  ಕೊನೆಯ ಗ್ರಾಮ ಬಗೌಜ್‌ ಗ್ರಾಮವನ್ನು ಶನಿವಾರ ಉಗ್ರರ ಹಿಡಿತದಿಂದ ಮುಕ್ತಗೊಳಿಸಲಾಗಿದೆ ಎಂದು ಅಮೆರಿಕ ಬೆಂಬಲಿತ ಸಿರಿಯಾ ಪ್ರಜಾಸತ್ಮಾತ್ಮಕ ಪಡೆ (ಎಸ್‌ಡಿಎಫ್‌) ಘೋಷಿಸಿದೆ. 

’ಇಲ್ಲಿನ ಬಗೌಜ್‌ ಗ್ರಾಮದಲ್ಲಿ ಹಿಡಿತ ಹೊಂದಿದ್ದ ಐಎಸ್‌ ವಿರುದ್ಧ ಸೇನಾ ಹೋರಾಟ ಯಶಸ್ವಿಯಾಗಿದ್ದು, ಹೋರಾಟದಲ್ಲಿ ಸಂಪೂರ್ಣವಾಗಿ ಯಶಸ್ಸು ಸಿಕ್ಕಿದೆ‘ ಎಂದು ಎಸ್‌ಡಿಎಫ್‌ ತಿಳಿಸಿದೆ.

ಬಗೌಜ್‌ನಲ್ಲಿ ಐಎಸ್‌ ಪಡೆ‌ ಮೊದಲಿನಿಂದಲೂ ಸಾಕಷ್ಟು ಪ್ರಾಬಲ್ಯ ಹೊಂದಿತ್ತು. ಇದೀಗ ಈ ಗ್ರಾಮವನ್ನು ಉಗ್ರರಿಂದ ಮುಕ್ತಗೊಳಿಸುವ ಮೂಲಕ ಸಿರಿಯಾ ಮತ್ತು ಇರಾಕ್‌ನಲ್ಲಿ ನೆಲೆಯೂರಿದ್ದ ಐಎಸ್‌ನ ಪಾರುಪತ್ಯ ಕೊನೆಗೊಂಡಿದೆ.

ಐಎಸ್‌ ಉಗ್ರರ ಹಿಡಿತವನ್ನು ಕೊನೆಗಾಣಿಸಲು ಅಮೆರಿಕದ ಹಿಂದಿನ ಅಧ್ಯಕ್ಷ ಬರಾಕಕ್‌ ಒಬಾಮಾ ಹಾಗೂ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ಬೆಂಬಲ ನೀಡಿದ್ದರು. ಕಳೆದ ಐದು ವರ್ಷಗಳಿಂದ ನಡೆದ ಸುದೀರ್ಘ ಹೋರಾಟದಲ್ಲಿ ಉಗ್ರರನ್ನು ಗುರಿಯಾಗಿರಿಸಿಕೊಂಡು 1 ಲಕ್ಷಕ್ಕೂ ಹೆಚ್ಚು ಬಾಂಬ್‌ ಹಾಕಲಾಗಿದ್ದು, ಸಾಕಷ್ಟು ಮಂದಿ ಯೋಧರು, ನಾಗರಿಕರು ಪ್ರಾಣ ಕಳೆದುಕೊಂಡಿದ್ದರು.

’ಅಮೆರಿಕ ಬೆಂಬಲಿತ ಮಿತ್ರಪಡೆಗಳು ಶನಿವಾರ ಬೆಳಿಗ್ಗೆ ಗ್ರಾಮದ ಮೇಲೆ ವೈಮಾನಿಕ ದಾಳಿ ನಡೆಸಿದವು, ಕೆಲವೊಂದು ಗುಹೆಗಳಲ್ಲಿ ಉಗ್ರರೂ ಇನ್ನೂ ಕೂಡ ಅವಿತಿದ್ದು, ಅವರನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ‘ ಎಸ್‌ಡಿಎಫ್‌ನ ವಕ್ತಾರ ಕಿನೊ ಗ್ಯಾಬ್ರಿಯಲ್‌ ಅವರು ತಿಳಿಸಿದ್ದಾರೆ.

ಹಿಂಸಾಚಾರದ ಹಾದಿ...

ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ವೇಳೆ ಸಿರಿಯಾ ಮತ್ತು ಇರಾಕ್‌ನಲ್ಲಿ ಸಾವಿರಾರು ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡು, ಅವರಿಗೆ ತೀವ್ರತರದ ಹಿಂಸೆ ನೀಡಲಾಗಿತ್ತು. ಸಂಘಟನೆ ವಿರೋಧಿಗಳನ್ನು ಸಾರ್ವಜನಿಕವಾಗಿ ಹತ್ಯೆಗೈದು, ಅದರ ವಿಡಿಯೊ ಚಿತ್ರೀಕರಿಸಿ, ಆನ್‌ಲೈನ್‌ಗೆ ಅಪ್‌ಲೋಡ್‌ ಮಾಡಲಾಗುತ್ತಿತ್ತು.

ಇದಲ್ಲದೇ, ಇರಾಕ್‌ನ ಸಿಂಜಾರ್‌ ಪ್ರಾಂತ್ಯದ ಯಾಜಿದಿ ಧಾರ್ಮಿಕ ಅಲ್ಪಸಂಖ್ಯಾತ ಗುಂಪಿನ ಯುವತಿಯರನ್ನು ಅಪಹರಿಸಿದ್ದ ಐಎಸ್‌ ಸಂಘಟನೆಯ ಉಗ್ರರು, ನಂತರ ಅವರನ್ನು ಲೈಂಗಿಕ ಜೀತದಾಳುಗಳನ್ನಾಗಿ ಬಳಸಿಕೊಂಡಿದ್ದರು. ಈ ಪೈಕಿ ಹಲವರ ಸುಳಿವು ಇನ್ನೂ ಪತ್ತೆಯಾಗಿಲ್ಲ.

***

ಸಿರಿಯಾ ಪ್ರಾಂತ್ಯದಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಭಯೋತ್ಪಾದಕರ ಹಿಡಿತದಿಂದ ಸಂಪೂರ್ಣ ಮುಕ್ತವಾಗಿದೆ.

– ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !