ಧಾರ್ಮಿಕ ಸ್ವಾತಂತ್ರ್ಯಉಲ್ಲಂಘನೆ ಪಟ್ಟಿಯಲ್ಲಿ ಪಾಕ್‌ ಹೆಸರು

7

ಧಾರ್ಮಿಕ ಸ್ವಾತಂತ್ರ್ಯಉಲ್ಲಂಘನೆ ಪಟ್ಟಿಯಲ್ಲಿ ಪಾಕ್‌ ಹೆಸರು

Published:
Updated:

ಇಸ್ಲಾಮಾಬಾದ್‌ : ಜನರ ಧಾರ್ಮಿಕ ಸ್ವಾತಂತ್ರ್ಯ ಹತ್ತಿಕ್ಕುವ ರಾಷ್ಟ್ರಗಳ ವಾರ್ಷಿಕ ಪಟ್ಟಿಗೆ ಪಾಕಿಸ್ತಾನ, ಚೀನಾ, ಸೌದಿ ಅರೇಬಿಯಾ ಸೇರಿದಂತೆ ಇತರ ಏಳು ರಾಷ್ಟ್ರಗಳನ್ನು ಅಮೆರಿಕ ಮಂಗಳವಾರ ಸೇರ್ಪಡೆ ಮಾಡಿದೆ.

ಅಮೆರಿಕದ ನಿರ್ಧಾರವನ್ನು ತಿರಸ್ಕರಿಸಿರುವ ಪಾಕಿಸ್ತಾನವು, ಈ ತೀರ್ಮಾನ ‘ಏಕಪಕ್ಷೀಯ ಮತ್ತು ರಾಜಕೀಯ ಪ್ರೇರಿತ'ವಾಗಿದೆ ಎಂದು ಟೀಕಿಸಿದೆ.

ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಡೆಯುವ ವ್ಯವಸ್ಥಿತ ದಾಳಿ ಮತ್ತು ಧಾರ್ಮಿಕ ಹಿಂಸಾಚಾರ ಆಧರಿಸಿ ಅಂತಹ ದೇಶಗಳ ವಾರ್ಷಿಕ ಪಟ್ಟಿಯನ್ನು ಅಮೆರಿಕ ಪ್ರಕಟಿಸಿದೆ.

‘ಅಮೆರಿಕದ ಈ ಕ್ರಮ ಏಕಪಕ್ಷೀಯವೂ ಮತ್ತು ರಾಜಕೀಯ ಪ್ರೇರಿತವೂ ಆಗಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ವಾರ್ಷಿಕ ವರದಿಯನ್ನು ನಾವು ತಿರಸ್ಕರಿಸುತ್ತೇವೆ’ ಎಂದು ಪಾಕಿಸ್ತಾನದ ವಿದೇಶಾಂಗ ಕಾರ್ಯಾಲಯ ಹೇಳಿಕೆಯಲ್ಲಿ ತಿಳಿಸಿದೆ.

‘ಈ ಪಟ್ಟಿ ಪಕ್ಷಪಾತದಿಂದ ಕೂಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇಂತಹ ಅನಪೇಕ್ಷಿತ ಕಸರತ್ತಿನಲ್ಲಿ ಸ್ವಯಂಘೋಷಿತ ತೀರ್ಪುಗಾರರು ಭಾಗಿಯಾಗಿರುವುದು ರುಜುವಾತಾಗುತ್ತಿದೆ. ಅಲ್ಲದೆ, ಈ ಪಟ್ಟಿಯ ನಿಷ್ಪಕ್ಷಪಾತದ ಬಗ್ಗೆ ಗಂಭೀರ ಪ್ರಶ್ನೆಗಳೂ ಇವೆ’ ಎಂದು ವಿದೇಶಾಂಗ ಕಾರ್ಯಾಲಯ ಹೇಳಿದೆ.

‘ಪಾಕಿಸ್ತಾನವು ಬಹು ಧಾರ್ಮಿಕ ಮತ್ತು ಬಹುಸಂಸ್ಕೃತಿಯ ಸಮಾಜದಿಂದ ಕೂಡಿದೆ. ವಿಭಿನ್ನ ಧರ್ಮಗಳು ಮತ್ತು ಪಂಥದ ಜನರು ಒಟ್ಟಾಗಿ ವಾಸಿಸುತ್ತಿದ್ದಾರೆ. ಇದರಲ್ಲಿ ಶೇಕಡಾ 4ರಷ್ಟು ಕ್ರಿಶ್ಚಿಯನ್ನರು, ಹಿಂದೂಗಳು, ಬೌದ್ಧರು ಮತ್ತು ಸಿಖ್ಖರು ಇದ್ದಾರೆ. ಅಲ್ಪಸಂಖ್ಯಾತರನ್ನು ಸಮಾನವಾಗಿ ನಡೆಸಿಕೊಳ್ಳಲಾಗುತ್ತಿದೆ. ಎಲ್ಲರೂ ಮಾನವ ಹಕ್ಕುಗಳನ್ನು ಯಾವುದೇ ತಾರತಮ್ಯವಿಲ್ಲದೆ, ಅನುಭವಿಸುತ್ತಿದ್ದಾರೆ. ಇದು ದೇಶದ ಸಂವಿಧಾನದ ತತ್ವವೂ ಆಗಿದೆ’ ಎಂದು ಅದು ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !