ಚಂಡಮಾರುತ: ಉತ್ತರ ಕರೊಲಿನಾದಲ್ಲಿ ಭಾರಿ ಮಳೆ

7

ಚಂಡಮಾರುತ: ಉತ್ತರ ಕರೊಲಿನಾದಲ್ಲಿ ಭಾರಿ ಮಳೆ

Published:
Updated:
Deccan Herald

ವಿಲ್ಮಿಂಗ್ಟನ್‌: ಫ್ಲಾರೆನ್ಸ್‌ ಚಂಡಮಾರುತದ ಪರಿಣಾಮ ಅಮೆರಿಕದ ಉತ್ತರ ಕರೊಲಿನಾದ ತೀರ ಪ್ರದೇಶದಲ್ಲಿ ಶುಕ್ರವಾರ ಭಾರಿ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಉತ್ತರ ಕರೊಲಿನಾ, ದಕ್ಷಿಣ ಕರೊಲಿನಾ ಮತ್ತು ವರ್ಜೀನಿಯಾದಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಯ ಪರಿಣಾಮ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದೆ. ಕೆಲವೆಡೆ ಭೂಕುಸಿತ ಸಂಭವಿಸಿದೆ ಎಂದೂ ತಿಳಿಸಿದ್ದಾರೆ.

ಉತ್ತರ ಕರೊಲಿನಾ, ದಕ್ಷಿಣ ಕರೊಲಿನಾ, ಜಾರ್ಜಿಯಾ, ಮೇರಿಲ್ಯಾಂಡ್‌ ಮತ್ತು ವರ್ಜೀನಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

 

 

 

ಬರಹ ಇಷ್ಟವಾಯಿತೆ?

  • 2

    Happy
  • 1

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !