ಭಾರತದೊಂದಿಗೆ ರಕ್ಷಣಾ ಸಂಬಂಧ ಬಲವರ್ಧನೆಗೆ ಅಮೆರಿಕದ ಮಸೂದೆಯಲ್ಲಿ ಇಂಗಿತ

7

ಭಾರತದೊಂದಿಗೆ ರಕ್ಷಣಾ ಸಂಬಂಧ ಬಲವರ್ಧನೆಗೆ ಅಮೆರಿಕದ ಮಸೂದೆಯಲ್ಲಿ ಇಂಗಿತ

Published:
Updated:

ವಾಷಿಂಗ್ಟನ್ : ₹46 ಲಕ್ಷ ಕೋಟಿ ಮೊತ್ತದ ರಕ್ಷಣಾ ವೆಚ್ಚ ಮಸೂದೆಗೆ ಅಮೆರಿಕ ಸಂಸತ್ ಗುರುವಾರ ಅಂಗೀಕಾರ ನೀಡಿದೆ. ಭಾರತದ ಜೊತೆಗಿನ ಅಮೆರಿಕ ರಕ್ಷಣಾ ಸಂಬಂಧವನ್ನು ಬಲಗೊಳಿಸುವ ಉದ್ದೇಶವನ್ನು ಮಸೂದೆ ಒಳಗೊಂಡಿದೆ. 

2016ರಲ್ಲಿ ಬರಾಕ್ ಒಬಾಮ ಆಡಳಿತದಲ್ಲಿ ಭಾರತವನ್ನು ಪ್ರಮುಖ ರಕ್ಷಣಾ ಪಾಲುದಾರ ದೇಶ ಎಂದು ಅಮೆರಿಕ ಘೋಷಿಸಿತ್ತು. ಡೊನಾಲ್ಡ್ ಟ್ರಂಪ್ ಸರ್ಕಾರವೂ ಭಾರತಕ್ಕೆ ಮಹತ್ವ ನೀಡಿರುವುದು ಸಂಸತ್ತಿನಲ್ಲಿ ಅಂಗೀಕಾರ ಪಡೆದ ಎನ್‌ಡಿಎಎ ಕಾಯ್ದೆಯ ಅಂಶಗಳಿಂದ ದೃಢಪಟ್ಟಿದೆ. 

ಕಡಲ ರಕ್ಷಣಾ ಬಲ ವೃದ್ಧಿ ಸೇರಿದಂತೆ ಭಾರತದ ಜೊತೆ ಅಮೆರಿಕವು ರಕ್ಷಣಾ ಸಹಕಾರ, ತಂತ್ರಜ್ಞಾನ ವರ್ಗಾವಣೆ, ಭಾರತದ ರಕ್ಷಣಾ ಸಾಮರ್ಥ್ಯ ಅಭಿವೃದ್ಧಿಯಲ್ಲೂ ನೆರವಾಗುವ ಹಲವು ಅಂಶಗಳನ್ನು ಪ್ರಸ್ತಾಪಿಸಲಾಗಿದೆ. 

ಉಭಯ ದೇಶಗಳು ಪರ್ಷಿಯನ್ ಕೊಲ್ಲಿ, ಹಿಂದೂ ಮಹಾಸಾಗರ, ಪಶ್ಚಿಮ ಪೆಸಿಫಿಕ್ ಸಾಗರದಲ್ಲಿ ಜಂಟಿ ರಕ್ಷಣಾ ಕಸರತ್ತು ಹಮ್ಮಿಕೊಳ್ಳಬೇಕು. ಪ್ರಾಕೃತಿಕ ವಿಕೋಪದಂತಹ ಪರಿಸ್ಥಿತಿಯಲ್ಲಿ ಭಾರತದ ಜೊತೆ ಸಹಕಾರದಿಂದ ಕೆಲಸ ಮಾಡಬೇಕು ಎಂಬ ಅಂಶಗಳಿವೆ.

ಇಂಡೊ–ಪೆಸಿಫಿಕ್ ಪ್ರದೇಶದಲ್ಲಿ ಸ್ಥಿರತೆ ಹಾಗೂ ಮುಕ್ತ ವಾತಾವರಣ ನಿರ್ಮಿಸಲು ಭಾರತ, ಆಸ್ಟ್ರೇಲಿಯಾ, ಜಪಾನ್ ಜೊತೆ ಅಮೆರಿಕ ಕೈಜೋಡಿಸಬೇಕು ಎಂಬುದನ್ನು ಉಲ್ಲೇಖಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !