ಶುಕ್ರವಾರ, ನವೆಂಬರ್ 15, 2019
23 °C

ಅನುರಾಗ್‌ ಸಿಂಘಾಲ್‌ ಫೆಡರಲ್‌ ಕೋರ್ಟ್ನ್ಯಾಯಾಧೀಶ

Published:
Updated:
Prajavani

ವಾಷಿಂಗ್ಟನ್‌ : ಭಾರತ ಸಂಜಾತ ಅಮೆರಿಕದ ಅನುರಾಗ್‌ ಸಿಂಘಾಲ್‌ ಅವರನ್ನು ಫ್ಲಾರಿಡಾದ ಫೆಡರಲ್‌ ಕೋರ್ಟ್‌ ನ್ಯಾಯಾಧೀಶರನ್ನಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಾಮನಿರ್ದೇಶನ ಮಾಡಿದ್ದಾರೆ.

ಶ್ವೇತ ಭವನವು ನಾಮನಿರ್ದೇಶನಗೊಳಿಸಿ ಸೆನೆಟ್‌ಗೆ ಕಳುಹಿಸಿರುವ 17 ಮಂದಿ ಪಟ್ಟಿಯಲ್ಲಿ ಸಿಂಘಾಲ್‌ ಸಹ ಒಬ್ಬರಾಗಿದ್ದಾರೆ. ಈ ಸ್ಥಾನಕ್ಕೇರಿದ ಭಾರತ ಸಂಜಾತರಲ್ಲಿ ಸಿಂಘಾಲ್‌ ಮೊದಲಿಗರು. ಅವರ ನೇಮಕದ ದೃಢೀಕರಣವು ಬುಧವಾರ ಸೆನೆಟ್‌ ನ್ಯಾಯಾಂಗ ಸಮಿತಿಯಲ್ಲಿ ನಿರ್ಧಾರಗೊಳ್ಳಲಿದೆ.

 

ಪ್ರತಿಕ್ರಿಯಿಸಿ (+)