ಅಮೆರಿಕ, ಯುರೋಪ್‌ ವಿದ್ವಾಂಸರಿಂದ ತೇಲ್ತುಂಬ್ಡೆಗೆ ಬೆಂಬಲ

7
ಮಹಾರಾಷ್ಟ್ರ ಸರ್ಕಾರದಿಂದ ಬಂಧನಕ್ಕೆ ಖಂಡನೆ

ಅಮೆರಿಕ, ಯುರೋಪ್‌ ವಿದ್ವಾಂಸರಿಂದ ತೇಲ್ತುಂಬ್ಡೆಗೆ ಬೆಂಬಲ

Published:
Updated:
Prajavani

ವಾಷಿಂಗ್ಟನ್‌: ದಲಿತ ಚಿಂತಕ ಆನಂದ್ ತೇಲ್ತುಂಬ್ಡೆ ಅವರ ಬಂಧನದ ವಿರುದ್ಧ ಜಾಗತಿಕ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿದೆ. ನಾಗರಿಕ ಹಕ್ಕು ಹೋರಾಟಗಾರ ತೇಲ್ತುಂಬ್ಡೆ ವಿರುದ್ಧ ಪಿತೂರಿ ಮಾಡುವುದನ್ನು ತಕ್ಷಣವೇ ಕೈಬಿಡಬೇಕು ಎಂದು ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರವನ್ನು ಅಮೆರಿಕ ಮತ್ತು ಯುರೋಪ್‌ನ 600ಕ್ಕೂ ಅಧಿಕ ವಿದ್ವಾಂಸರು ಒತ್ತಾಯಿಸಿದ್ದಾರೆ.

ತೇಲ್ತುಂಬ್ಡೆ ವಿರುದ್ಧ ‘ಸುಳ್ಳು ಆರೋಪ’ವನ್ನು ದಾಖಲಿಸಿರುವ ಕುರಿತಂತೆ ವಿದ್ವಾಂಸರು ಬುಧವಾರ ಪ್ರಕಟಣೆಯನ್ನು ಹೊರಡಿಸಿದ್ದು, ‘ನಾಗರಿಕ ಹಕ್ಕು ಹೋರಾಟಗಾರ’ನನ್ನು ಬಂಧಿಸಿರುವುದನ್ನು ಅತ್ಯಂತ ಕಟುವಾಗಿ ಖಂಡಿಸಿರುವುದಾಗಿ ತಿಳಿಸಿದೆ.

‘ತೇಲ್ತುಂಬ್ಡೆ ಅವರ ಬರಹಗಳು ಪ್ರಜಾಪ್ರಭುತ್ವದ ಬಗ್ಗೆ ವಿಮರ್ಶಾತ್ಮಕ ಚರ್ಚೆ, ಸಾಮಾಜಿಕ ನ್ಯಾಯ, ಜಾಗತೀಕರಣ ಕುರಿತಾಗಿ ಅಗಾಧ ಕೊಡುಗೆ ನೀಡಿವೆ. ಹೀಗಿದ್ದರೂ, 2018ರ ಆಗಸ್ಟ್‌ 28ರಂದು ಮಹಾರಾಷ್ಟ್ರ ‍ಪೊಲೀಸರು ಅವರ ಮನೆಯನ್ನು ಅಕ್ರಮವಾಗಿ ಶೋಧ ನಡೆಸಿದ್ದರು’ ಪ್ರಿನ್ಸ್‌ಟನ್‌, ಯಾಲೆ, ಆಕ್ಸ್‌ಫರ್ಡ್‌, ಲಂಡನ್‌ಸ್ಕೂಲ್‌ ಆಫ್‌ ಏಕಾನಮಿಕ್ಸ್‌ನ ವಿದ್ವಾಂಸರು ಸಹಿಹಾಕಿದ ಪ್ರಕಟಣೆಯನ್ನು ಇಂಡಿಯನ್‌ ಸಿವಿಲ್‌ ವಾಚ್‌ (ಐಸಿಡಬ್ಲ್ಯೂ) ಬಿಡುಗಡೆ ಮಾಡಿದೆ.

‘ಕೇವಲ 72 ಗಂಟೆಗಳಲ್ಲಿ 600ಕ್ಕೂ ಅಧಿಕ ಮಂದಿ ನಮ್ಮ ಅಭಿಯಾನವನ್ನು ಬೆಂಬಲಿಸಿ ಸಹಿಹಾಕಿದ್ದಾರೆ’ ಇದರ ನೇತೃತ್ವ ವಹಿಸಿದ್ದ ಐಸಿಡಬ್ಲ್ಯೂ ವಕ್ತಾರ ಪ್ರೊಫೆಸರ್‌ ರಾಜಸ್ವಾಮಿ ತಿಳಿಸಿದ್ದಾರೆ.

ಯಾಲೆ ವಿವಿಯ ಎಲಿಜಬೆತ್‌ ವೂಡ್ಸ್‌, ಹಾರ್ವರ್ಡ್‌ ವಿವಿಯ ಕಾರ್ನಲ್‌ ವೆಸ್ಟ್‌, ಡೊರಿಸ್‌ ಸೊಮ್ಮೆರ್‌, ಎಂಐಟಿಯ ಮ್ರಿಗಾಂಕಾ, ನ್ಯೂಯಾರ್ಕ್‌ ವಿವಿಯ ಸಿಂಡಿ ಕಾಟ್ಸ್‌ ಸಹಿಹಾಕಿದವರಲ್ಲಿ ಪ್ರಮುಖರು.

ತೇಲ್ತುಂಬ್ಡೆ ಮೇಲಿನ ಆರೋಪವೇನು ? 
2018ರ ಜನವರಿ 1ರಂದು ಕೋರೆಗಾಂವ್‌–ಭೀಮಾದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತೇಲ್ತುಂಬ್ಡೆ ವಿರುದ್ಧವೂ ಆರೋಪ ಹೊರಿಸಲಾಗಿದೆ. ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬರಹ ಇಷ್ಟವಾಯಿತೆ?

 • 15

  Happy
 • 2

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !