ರಷ್ಯಾ ಮೇಲೆ ನಿರ್ಬಂಧ

7

ರಷ್ಯಾ ಮೇಲೆ ನಿರ್ಬಂಧ

Published:
Updated:

ವಾಷಿಂಗ್ಟನ್ (ಎಎಫ್‌ಪಿ): ಬ್ರಿಟನ್‌ನಲ್ಲಿರುವ ರಷ್ಯಾದ ಮಾಜಿ ಡಬಲ್‌ ಏಜೆಂಟ್ ಹಾಗೂ ಅವರ ಪುತ್ರಿ ಮೇಲೆ ‘‌ರಾಸಾಯನಿಕ ದಾಳಿ’ ನಡೆಸಲು ಯತ್ನಿಸಿದ್ದಕ್ಕಾಗಿ ರಷ್ಯಾ ಮೇಲೆ ಹೊಸದಾಗಿ ನಿರ್ಬಂಧ ವಿಧಿಸುತ್ತಿರುವುದಾಗಿ ಅಮೆರಿಕ ಗುರುವಾರ ಹೇಳಿದೆ. ಆದರೆ ಈ ನಿರ್ಬಂಧ ಕುರಿತ ವಿವರವನ್ನು ಅದು ಬಹಿರಂಗಪಡಿಸಿಲ್ಲ.

‘ಅಂತರರಾಷ್ಟ್ರೀಯ ನಿಯಮ ಉಲ್ಲಂಘಿಸಿ ಬ್ರಿಟನ್ ಪ್ರಜೆ ಸರ್ಗೈ ಸ್ಕೃಪಲ್ ಹಾಗೂ ಅವರ ಮಗಳು ಯುಲಿಯಾ ಮೇಲೆ ದಾಳಿ ನಡೆಸಲು ರಷ್ಯಾ ರಾಸಾಯನಿಕ/ ಜೈವಿಕ ಅಸ್ತ್ರ ಬಳಸಿದೆ’ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರೆ ಹೆದರ್ ನೊವರ್ಟ್‌ ತಿಳಿಸಿದ್ದಾರೆ. 

ಸೂಚನೆ ಹೊರಡಿಸಿದ ದಿನದಿಂದ 15 ದಿನಗಳ ಒಳಗಾಗಿ ಈ ನಿರ್ಬಂಧ ಜಾರಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ. 

ಡಬಲ್ ಏಜೆಂಟ್ ಎಂದರೆ, ಒಂದು ರಾಷ್ಟ್ರದ ಗೂಢಚಾರಿಯಂತೆ ಕಾರ್ಯ ನಿರ್ವಹಿಸುತ್ತಿದ್ದರೂ ವಾಸ್ತವವಾಗಿ ಶತ್ರು ರಾಷ್ಟ್ರದ ಪರವಾಗಿ ಇರುವವರು. 

ಒಪ್ಪಿಕೊಳ್ಳಲು ಅಸಾಧ್ಯ’

‘ಸ್ಕೃಪಲ್ ಪ್ರಕರಣಕ್ಕೂ ಸಂಬಂಧ ಕಲ್ಪಿಸಿರುವ ಈ ಅಮೆರಿಕದ ಕ್ರಮ ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ರಷ್ಯಾ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕಾವ್ ಅವರು ನಿರ್ಬಂಧ ಕುರಿತು ಪ್ರತಿಕ್ರಿಯಿಸಿದ್ದಾರೆ. ‌

ಆದರೆ ಅಮೆರಿಕದೊಂದಿಗೆ ಇನ್ನೂ ಸಹ ರಚನಾತ್ಮಕ ಬಾಂಧವ್ಯ ಹೊಂದುವ ಭರವಸೆ ಇದೆ ಎಂದು ಅವರು ಹೇಳಿದ್ದಾರೆ. ‌

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !