ಉಗ್ರ ಹಿಂದುತ್ವವಾದ ನಿಯಂತ್ರಣಕ್ಕೆ ಆಗ್ರಹ

7

ಉಗ್ರ ಹಿಂದುತ್ವವಾದ ನಿಯಂತ್ರಣಕ್ಕೆ ಆಗ್ರಹ

Published:
Updated:

ವಾಷಿಂಗ್ಟನ್‌: ಭಾರತದಲ್ಲಿ ಹೆಚ್ಚುತ್ತಿರುವ ಹಿಂದುತ್ವ ಉಗ್ರವಾದ ನಿಯಂತ್ರಿಸಬೇಕು ಎಂದು ಅಮೆರಿಕದಲ್ಲಿನ ಧಾರ್ಮಿಕ ಸ್ವಾತಂತ್ರ್ಯ ಕಾರ್ಯಕರ್ತರು ಮತ್ತು ಹಲವು ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

 ಭಾರತ–ಅಮೆರಿಕ ಮುಸ್ಲಿಂ ಕೌನ್ಸಿಲ್‌ ಆಯೋಜಿಸಿದ್ದ ‘ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಮುಖಂಡರು,  ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ ನಡೆಸುತ್ತಿರುವ ಸಂಘಟನೆಗಳಿಗೆ ಶಿಕ್ಷೆಯಾಗುವಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿವೆ.

‘ಮುಸ್ಲಿಮರು ಮತ್ತು ಕ್ರೈಸರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಹಿಂಸಾಚಾರವನ್ನು ನಿಗ್ರಹಿಸುವಲ್ಲಿ ಮತ್ತು ಖಂಡಿಸಲು ಪ್ರಧಾನಿ ನರೇಂದ್ರ ಮೋದಿ ವಿಫಲವಾಗಿರುವುದರಿಂದ ಮತ್ತಷ್ಟು ಕುಮ್ಮಕ್ಕು ನೀಡಿದಂತಾಗಿದೆ’ ಎಂದು ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ಮಾಜಿ ಮುಖ್ಯಸ್ಥ ಕತ್ರಿನಾ ಲ್ಯಾಂಟೋಸ್‌ ಸ್ವೆಟ್ಟ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !