ಪಾಕ್‌ ಸೇನಾ ಸಿಬ್ಬಂದಿಗೆ ತರಬೇತಿ ಸ್ಥಗಿತ

7

ಪಾಕ್‌ ಸೇನಾ ಸಿಬ್ಬಂದಿಗೆ ತರಬೇತಿ ಸ್ಥಗಿತ

Published:
Updated:

ಇಸ್ಲಾಮಾಬಾದ್‌: ಪಾಕಿಸ್ತಾನ ಸೇನಾ ಸಿಬ್ಬಂದಿಗೆ ಅಮೆರಿಕದ ಸಂಸ್ಥೆಗಳಲ್ಲಿ ದಶಕಕ್ಕೂ ಹೆಚ್ಚು ಕಾಲದಿಂದ ನೀಡುತ್ತಿದ್ದ ಸೇನಾ ತರಬೇತಿಯನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ ಸ್ಥಗಿತಗೊಳಿಸಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ರಾವಲ್ಪಿಂಡಿಯಲ್ಲಿ ಮಂಗಳವಾರ ನಡೆದ ಮೊದಲ ಜಂಟಿ ಸೇನಾ ಸಲಹಾ ಸಮಿತಿ ಸಭೆಯಲ್ಲಿ ರಷ್ಯಾ ರಕ್ಷಣಾ ಕೇಂದ್ರದಲ್ಲಿ ಪಾಕಿಸ್ತಾನ ಸೇನಾ ಸಿಬ್ಬಂದಿಗೆ ತರಬೇತಿ ನೀಡುವ ಕುರಿತ ಒಪ್ಪಂದಕ್ಕೆ ಎರಡೂ ದೇಶಗಳು ಸಹಿ ಹಾಕಿದ್ದವು. ಇದರ ಬೆನ್ನಲ್ಲೇ ಅಮೆರಿಕ ಈ ನಿರ್ಧಾರ ಕೈಗೊಂಡಿದೆ.

ಎರಡೂ ದೇಶಗಳ ದ್ವಿಪಕ್ಷೀಯ ರಕ್ಷಣಾ ಸಂಬಂಧದ ಸದ್ಯದ ಸ್ಥಿತಿ ಕುರಿತೂ ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿದುಬಂದಿದೆ.

‘ಪಾಕಿಸ್ತಾನವು, ಸುಳ್ಳು ಮತ್ತು ತಂತ್ರಗಾರಿಕೆ ಹೊರತಾಗಿ ಅಮೆರಿಕಕ್ಕೆ ಬೇರೆ ಏನನ್ನೂ ನೀಡಿಲ್ಲ. ಉಗ್ರರಿಗೆ ರಕ್ಷಣೆ ನೀಡುತ್ತಿದೆ’ ಎಂದು ಟ್ರಂಪ್‌ ಜನವರಿಯಲ್ಲಿ ಆರೋಪಿಸಿದ್ದರು. ಆನಂತರದಲ್ಲಿ ಎರಡೂ ದೇಶಗಳ ನಡುವಿನ ಸಂಬಂಧ ಹಳಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !