‘ನಂಗ ಮುದುಕ ಅನ್ನಬ್ಯಾಡ್ರೋ...!

7

‘ನಂಗ ಮುದುಕ ಅನ್ನಬ್ಯಾಡ್ರೋ...!

Published:
Updated:

ವಿಜಯಪುರ: ‘ನಾ ಎಲ್ಲ ರೀತಿಯಿಂದಲೂ ಗಟ್ಟಿಮುಟ್ಟ ಅದೀನಿ. ನನ್ನ ಎಲ್ಲ ಅವಯವಗಳು ಸರಿಯಾಗಿಯೇ ಇವೆ. ಆಗಲಾರದ ಕೆಲವರು ನನ್ನನ್ನು ಮುದುಕ ಅಂತಾರ. ನೀವ್‌ ಹಂಗ ಅನ್ನಬ್ಯಾಡ್ರೋ...!’

ಸಿಂದಗಿ ತಾಲ್ಲೂಕಿನ ಮದರಿ ಗ್ರಾಮದ ಮಲ್ಲಿಕಾರ್ಜುನಪ್ಪ ಟೆಂಗಳಿ ಅವರ ತೋಟದಲ್ಲಿ ಶುಕ್ರವಾರ ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿದ್ದ ‘ನಿಂಬೆ ಪುನಶ್ಚೇತನ ತರಬೇತಿ ಶಿಬಿರ’ದಲ್ಲಿ ಭಾಗಿಯಾಗಿದ್ದ ರೈತ ಸಮೂಹಕ್ಕೆ, ಎಂಬತ್ಮೂರರ ಹರೆಯದ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಮಾಡಿದ ಮನವಿ ಇದು.

‘ಇಲಾಖೆಯ ಕೆಲಸದ ನಿಮಿತ್ತ ನಾ ಇಂದಿಗೂ ರಾಜ್ಯದ ಎಲ್ಲೆಡೆ ಸುತ್ತಾಡುತ್ತಿರುವೆ. ಕಚೇರಿಯಲ್ಲೇ ಕುಳಿತು ಕೆಲಸ ಕಾರ್ಯ ಮಾಡಿಲ್ಲ. ಕೆಲಸ ಮಾಡಾಕ ವಯಸ್ಸು ಬೇಕಿಲ್ಲ, ಮನಸ್ಸು ಬೇಕು. ಯಾರೋ ಆಗದವ್ರು ಮಾತ್ರ ನನ್ನ ‘ಮುದುಕ’ ಅಂತಾರ. ನೀವ್‌ ಅವರಂದಂಗ ಅನ್ನಬ್ಯಾಡ್ರಿ’ ಎಂದು ಮನಗೂಳಿ ತಮ್ಮ ಜವಾರಿ ಭಾಷೆಯಲ್ಲೇ ಪುನರುಚ್ಚರಿಸುತ್ತಿದ್ದಂತೆ ನೆರೆದಿದ್ದ ಜನಸ್ತೋಮ ಹೊಟ್ಟೆ ಹಿಡಿದುಕೊಂಡು ನಕ್ಕಿತು.

‘ಹೆಂಗೋ ನಮ್ ಸಾಹೇಬ. ಸತತ ನಾಲ್ಕ್ ಸಲ ಸೋತವ ಈ ಬಾರಿ ಗೆದ್ದ. ಅದರ ಬೆನ್ನಿಗೆ ಮಂತ್ರಿ ಗಿರಿಯೂ ಸಿಕ್ತು. ಅಧಿಕಾರ ಬರ್ತಿದ್ದಂಗೆ ಹರೆಯದವ ಆಗ್ಯಾನಲ್ಲೋ’ ಎಂದು ಶಿಬಿರದಲ್ಲಿ ಪಾಲ್ಗೊಂಡಿದ್ದ ಪ್ರಗತಿಪರ ರೈತ ಮಿತ್ರರಿಬ್ಬರು ಕುಟುಕಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !