ನಿಮ್ಮ ಪುಣ್ಯ ಡಿ.ಸಿ. ಪ್ರಭಾರ ಇಲ್ಲ...!

7

ನಿಮ್ಮ ಪುಣ್ಯ ಡಿ.ಸಿ. ಪ್ರಭಾರ ಇಲ್ಲ...!

Published:
Updated:
Deccan Herald

ಯಾದಗಿರಿ: ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಮೂರು ತಿಂಗಳ ನಂತರ ಸಚಿವ ರಾಜಶೇಖರ ಪಾಟೀಲ ಅವರು ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆಗೆ ಬಂದಿದ್ದರು. ಜಿಲ್ಲಾಧಿಕಾರಿ ಕೂರ್ಮಾರಾವ್, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಕೈಗೆತ್ತಿಕೊಳ್ಳುತ್ತಿದ್ದಂತೆ ಯಥಾಪ್ರಕಾರ, ಸಿಬ್ಬಂದಿ ಕೊರತೆ.. ಪ್ರಭಾರ ಇದ್ದೇನೆ.. ಹೊಸದಾಗಿ ಬಂದಿದ್ದೇನೆ.. ಎಂದೆಲ್ಲ ಅಧಿಕಾರಿಗಳ ಸಬೂಬು ಶುರುವಾಯಿತು.

ಸಭೆಯಲ್ಲಿ ಆಗಾಗ ಚಾಟಿ ಬೀಸುತ್ತಿದ್ದ ಶಾಸಕರಾದ ರಾಜೂಗೌಡ ಮತ್ತು ಶರಣಬಸಪ್ಪ ದರ್ಶನಾಪುರ ಅವರು, ‘ಜಿಲ್ಲೆ ಪ್ರಭಾರ ಅಧಿಕಾರಿಗಳ ಕೈಯಲ್ಲಿದೆ. ಕಾಯಂ ಸಿಬ್ಬಂದಿ ನಿಯೋಜಿಸದೆ ಸರ್ಕಾರವು ಜಿಲ್ಲೆಗೆ ಅನ್ಯಾಯ ಎಸಗುತ್ತಿದೆ. ಎಷ್ಟು ಬಾರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸೋದು? ಪ್ರಭಾರ ಅಧಿಕಾರಿಗಳಿಂದ ಬೇಸತ್ತಿದ್ದೇವೆ’ ಎಂದು ಗುಡುಗಿದರು.

‘ಹೌದ್ರಿ... ನಾನೂ ಪ್ರಭಾರ (ಇನ್‌ಚಾರ್ಜ್‌) ಇದ್ದೇನೆ. ಕಾನೂನಿನಡಿ ಅವಕಾಶ ಇದ್ದಿದ್ರೆ ಸರ್ಕಾರ ನಿಮ್ಮ ಜಿಲ್ಲೆಗೆ ಡಿ.ಸಿ. ಸಿಇಒ ಹುದ್ದೆಗಳಿಗೂ ಪ್ರಭಾರ ಅಧಿಕಾರಿಗಳನ್ನು ಹಾಕ್ಬಿಡ್ತಿತ್ತು. ನಿಮ್ಮ ಪುಣ್ಯ ಅಂತಹ ಅವಕಾಶ ಕಾನೂನಿನಡಿ ಇಲ್ಲ’ ಎಂದು ಸಚಿವರೇ ಸಮಜಾಯಿಷಿ ನೀಡಿದಾಗ ಶಾಸಕರು ಪರಸ್ಪರ ದಿಟ್ಟಿಸಿಕೊಂಡು ಮೂಗಿನ ಮೇಲೆ ಬೆರಳಿಟ್ಟುಕೊಂಡರು.

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !