‘ಕೈ ಹಿಡಿದು ಕರೆದೊಯ್ಯುವುದೊಂದೇ ಬಾಕಿಯಿದೆ..!’

7

‘ಕೈ ಹಿಡಿದು ಕರೆದೊಯ್ಯುವುದೊಂದೇ ಬಾಕಿಯಿದೆ..!’

Published:
Updated:

ವಿಜಯಪುರ: ‘ಬೇಸ್‌ಲೈನ್‌ ಸರ್ವೇ ಪ್ರಕಾರ ರಾಜ್ಯದಲ್ಲಿ ಪ್ರತಿ ಕುಟುಂಬಕ್ಕೂ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಟ್ಟಿ
ದ್ದೇವೆ. ಬಳಕೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಇನ್ನೇನಿದ್ದರೂ ಬಯಲಿಗೆ ಹೋಗುತ್ತಿರುವವರನ್ನು ಕೈ ಹಿಡಿದು ಕರೆತಂದು, ಶೌಚಾಲಯದೊಳಕ್ಕೆ ಬಿಡುವುದೊಂದೇ ಬಾಕಿ ಉಳಿದಿದೆ...’

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್. ಅತೀಕ್‌, ವಿಜಯಪುರದಲ್ಲಿ ಈಚೆಗೆ
ನಡೆದ ಪತ್ರಿಕಾಗೋಷ್ಠಿಯಲ್ಲಿ ಶೌಚಾಲಯ ಬಳಕೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ನೀಡಿದ ಉತ್ತರವಿದು.

‘ಶೌಚಾಲಯ ನಿರ್ಮಾಣ ಕಡತಕ್ಕೆ ಸೀಮಿತವಾಗಿದೆ, ಶೌಚಾಲಯಗಳು ಬಳಕೆಯಾಗುತ್ತಿಲ್ಲ. ಕೆಲ ಚುನಾಯಿತ ಜನಪ್ರತಿನಿಧಿಗಳು, ಸರ್ಕಾರಿ ನೌಕರರು ಸಹ ಶೌಚಾಲಯ ನಿರ್ಮಿಸಿಕೊಂಡಿಲ್ಲ. ಕಾಗದದ ಮೇಲಷ್ಟೇ ಜಿಲ್ಲೆ ‘ಬಯಲು ಬಹಿರ್ದೆಸೆ ಮುಕ್ತ’ ಎಂದಾಗಿದೆ. ಅನು
ದಾನ ಖರ್ಚು ಮಾಡಲು ಯೋಜನೆ ರೂಪಿಸಿದ್ದೀರಾ’ ಎಂದು ಪರ್ತಕರ್ತರು ಪ್ರಶ್ನೆಗಳ ಸುರಿಮಳೆಗೈದರು.

‘ಸ್ವಚ್ಛ ಭಾರತದ ಪರಿಕಲ್ಪನೆಯಲ್ಲಿ. ಶೌಚಾಲಯ ನಿರ್ಮಾಣ ಮೊದಲ ಹಂತ. ನಿಗದಿತ ಗುರಿ ತಲುಪಿದ ಬಳಿಕ ಎರಡನೇ ಹಂತದಲ್ಲಿ ಶೌಚಾಲಯ ಬಳಕೆ ಬಗ್ಗೆ ವ್ಯಾಪಕವಾಗಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು’ ಎಂದು ಅತೀಕ್‌ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿದ್ದ ಹಿರಿಯ ಪತ್ರಕರ್ತರೊಬ್ಬರು, ‘ಹಾಗಾದರೆ, ಇನ್ನೊಂದು ದಶಕ ಜಾಗೃತಿಗಾಗಿ ಅನುದಾನ ಮೀಸಲಿಡುವ ಕಾರ್ಯಕ್ರಮ ಶೀಘ್ರದಲ್ಲೇ ಜಾರಿಗೊಳ್ಳಲಿದೆ’ ಎನ್ನುತ್ತಿದ್ದಂತೆ ನಗೆಬುಗ್ಗೆ ಚಿಮ್ಮಿತು.

ಡಿ.ಬಿ. ನಾಗರಾಜ

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !