ಭಾನುವಾರ, ಡಿಸೆಂಬರ್ 8, 2019
19 °C

25ರ ಸಂಭ್ರಮದಲ್ಲಿ ‘ಅಡಿಗಾಸ್’

Published:
Updated:

ಅಡಿಗಾಸ್ ಅಂದರೆ ಈ ನೆಲದ ಸ್ವಾದ ಪರಿಚಯಿಸುವ ರೆಸ್ಟೋರಂಟ್ ಎಂದೇ ಹೇಳಬಹುದು. 1994ರಲ್ಲಿ ಜಯನಗರದ 4ನೇ ಹಂತದಲ್ಲಿ ಮೊದಲ ಶಾಖೆ ಆರಂಭಿಸಿದ ಈ ಸಂಸ್ಥೆ, ರುಚಿಕರ ಅಡುಗೆಗಳಿಂದಲೇ ಖ್ಯಾತಿ ಪಡೆದಿದೆ. ಈಗಾಗಲೇ ರಾಜ್ಯದಲ್ಲಿ 25 ಶಾಖೆಗಳನ್ನು ಹೊಂದಿರುವ ಅಡಿಗಾಸ್ ಇದೇ ತಿಂಗಳಲ್ಲಿ ದೆಹಲಿಯಲ್ಲಿ ಎರಡು ಶಾಖೆಗಳನ್ನು ತೆರೆಯಲಿದೆ. 25ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ ಅಡಿಗಾಸ್‌. ಸಂಸ್ಥೆಯ ಚೀಫ್ ಆಪರೇಟಿಂಗ್ ಆಫಿಸರ್ ಬಿಜು ಥಾಮಸ್ ‘ಮೆಟ್ರೊ’ ಜೊತೆ ಮಾತನಾಡಿದ್ದಾರೆ.

ಅಡಿಗಾಸ್ ಅಂದರೆ..?

ಗ್ರಾಹಕರು ಸಂಸ್ಥೆಯ ಮೇಲೆ ಇಟ್ಟಿರುವ ನಂಬಿಕೆ ಆಧರಿಸಿ ಹೇಳುವುದಾದರೆ, ಈ ನೆಲದ ಸೊಗಡು. ರಾಜ್ಯದ ಬಹುದೊಡ್ಡ ರೆಸ್ಟೋರಂಟ್ ಸಹ ಹೌದು. ಕರ್ನಾಟಕ ಶೈಲಿಯ ಉಡುಪಿ ಖಾದ್ಯಗಳು ಸೇರಿದಂತೆ ದಕ್ಷಿಣ ಭಾರತದ ವಿವಿಧ ಖಾದ್ಯಗಳಿಗೆ ಜನ ನಮ್ಮ ರೆಸ್ಟೋರಂಟ್‌ಗಳಿಗೆ ಮುಗಿ ಬೀಳುತ್ತಾರೆ. ಸ್ವಾದಿಷ್ಟಕರವಾಗಿ ವಿವಿಧ ಖಾದ್ಯಗಳನ್ನು ಗ್ರಾಹಕರಿಗೆ ಉಣಬಡಿಸುತ್ತೇವೆ.

ಸಂಸ್ಥೆಯ ವಿಶೇಷತೆ ಏನು?

ತಾಜಾ ಸಸ್ಯಾಹಾರವನ್ನು ಆಗಿಂದಾಗಲೇ ಅತ್ಯಂತ ತ್ವರಿತವಾಗಿ ನಿಡುವುದೇ ನಮ್ಮ ವಿಶೇಷ. ಸಂಸ್ಥೆಯ ಯಾವುದೇ ಶಾಖೆಗೆ ಜನ ಹೋದರೂ ಒಂದೇ ರೀತಿಯ ರುಚಿ ನಾಲಗೆಗೆ ಸಿಗುತ್ತದೆ. ಅದಕ್ಕಾಗಿಯೇ ರಾಜ್ಯದಲ್ಲಿ ಸಸ್ಯಹಾರಿ ರೆಸ್ಟೋರಂಟ್‌ಗಳ ಪೈಕಿ ನಮ್ಮ ಸಂಸ್ಥೆಯೇ ನಂಬರ್‌ ಒನ್.

ನಮ್ಮಲ್ಲಿ ಆಯಾ ಪ್ರದೇಶಕ್ಕನುಗುಣವಾಗಿ ಆಹಾರ ಲಭ್ಯವಿದೆ. ಯಾವುದೇ ಖಾದ್ಯವನ್ನಾಗಲಿ ಒಂದೇ ಬಾರಿ ದೊಡ್ಡ ಪ್ರಮಾಣದಲ್ಲಿ ತಯಾರಿಸಿ ಸಂಗ್ರಹಿಸಿಡುವುದಿಲ್ಲ. ಬೆಳಿಗ್ಗೆ ಮಾಡಿದ್ದನ್ನು ಮಧ್ಯಾಹ್ನಕ್ಕೆ, ಮಧ್ಯಾಹ್ನ ಮಾಡಿದ್ದನ್ನು ರಾತ್ರಿಗೆ ಹಾಗೂ ರಾತ್ರಿ ಮಾಡಿದ್ದನ್ನು ಮತ್ತೆ ಬೆಳಿಗ್ಗೆಗೆ ಯಾವುದೇ ಕಾರಣಕ್ಕೂ ಬಳಸುವುದಿಲ್ಲ. ಹೀಗಾಗಿಯೇ, ಜಯನಗರದ 4ನೇ ಹಂತಕ್ಕೆ ಶಾಪಿಂಗ್‌ಗೆಂದು ಬರುವ ಬಹುತೇಕರು ಅಡಿಗಾಸ್‌ಗೆ ಬಂದು ಬಾಯಿ ಚಪ್ಪರಿಸಿಕೊಂಡು ಹೋಗುತ್ತಾರೆ.

ಒಟ್ಟು ಎಷ್ಟು ಶಾಖೆಗಳಿವೆ?

ನಗರದಲ್ಲಿ ಒಟ್ಟು 23 ಶಾಖೆಗಳಿವೆ. ಕೋಲಾರ ಹಾಗೂ ಮದ್ದೂರಿನಲ್ಲಿ ಒಂದೊಂದು ಶಾಖೆ ಇದೆ. ಅವುಗಳ ಹೊರತಾಗಿ ಇದೇ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ಎರಡು ಶಾಖೆಗಳನ್ನು ಆರಂಭಿಸಲಿದ್ದೇವೆ.

ಗ್ರಾಹಕರು ಯಾವ ಕಾರಣಕ್ಕೆ ಅಡಿಗಾಸ್‌ಗೆ ಬರಬೇಕು?

ಗ್ರಾಹಕರ ನಂಬಿಕೆಯೇ ನಮಗೆ ಆಧಾರ. ಹೀಗಾಗಿ, ಸತತ 25 ವರ್ಷಗಳಿಂದ ನಾವು ಯಶಸ್ವಿಯಾಗಿ ಸಾಗಿ ಬಂದಿದ್ದೇವೆ. ಗುಣಮಟ್ಟದ ಆಹಾರ ಹಾಗೂ ಆರೋಗ್ಯಕ್ಕೆ ಪೂರಕವಾದಂತಹ ಆಹಾರವನ್ನು ಗ್ರಾಹಕರಿಗೆ ಉಣಬಡಿಸುತ್ತೇವೆ. ಗ್ರಾಹಕರಿಗೆ ಅಡಿಗಾಸ್ ಮನೆಯಂತಾಗಿದೆ. ಗ್ರಾಹಕರಿಟ್ಟ ನಂಬಿಕೆಯನ್ನು ನಾವು ಉಳಿಸಿಕೊಂಡಿದ್ದೇವೆ. ಹೀಗಾಗಿ ಗ್ರಾಹಕರು ನಮ್ಮಲ್ಲಿಗೆ ಬರಬೇಕು. 

ರೆಸ್ಟೋರಂಟ್ ಹೊರತಾಗಿ ಅಡಿಗಾಸ್?

 ಬಹುತೇಕರು ಅಂದುಕೊಂಡಂತೆ ಅಡಿಗಾಸ್ ಕೇವಲ ರೆಸ್ಟೋರಂಟ್ ಮಾತ್ರ ಅಲ್ಲ. ರಾಜ್ಯದಲ್ಲಿ ನಮ್ಮದೊಂದು ದೊಡ್ಡ ಕೇಟರಿಂಗ್ ವ್ಯಾಪಾರವಿದೆ. ಜರ್ಮನ್ ಮೂಲದ ಎಸ್‌ಎಪಿಯಂತಹ ದೊಡ್ಡ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ 12 ವರ್ಷಗಳಿಂದ ನಿರಂತರವಾಗಿ ಕೆಟರಿಂಗ್ ವ್ಯವಸ್ಥೆ ಕಲ್ಪಿಸಿದ್ದೇವೆ.

ಅದರ ಹೊರತಾಗಿಯೂ ಆನ್‌ಲೈನ್ ಮೂಲಕ ಅಥವಾ ಆನ್‌ಲೈನ್ ಆಧಾರಿತ ಆ್ಯಪ್‌ಗಳ ಮೂಲಕ ಆಹಾರ ಪೂರೈಕೆಯಲ್ಲೂ ನಾವೇ ಮೊದಲಿಗರು. ಆನ್‌ಲೈನ್‌ನಲ್ಲಿ ಆಹಾರ ಖರೀದಿಸುವ ಬಹುತೇಕ ಗ್ರಾಹಕರ ಆಯ್ಕೆ ನಮ್ಮ ಸಂಸ್ಥೆಯೇ ಆಗಿದೆ.

ಒಂದೇ ರೀತಿಯ ರುಚಿ ನೀಡುವುದರ ಗುಟ್ಟೇನು?

ನಮ್ಮ ಎಲ್ಲ ಯೂನಿಟ್‌ಗಳಲ್ಲೂ ಒಂದೇ ರೀತಿಯ ಮೆನು ಇರುತ್ತದೆ. ಆಯಾ ಪ್ರದೇಶಗಳಿಗನುಗುಣವಾಗಿ ಕೆಲವಡೆ ಅಲ್ಲಿನ ಖಾದ್ಯಗಳನ್ನು ಪರಿಚಯಿಸಿದ್ದೇವೆ. ಎಲ್ಲ ಯೂನಿಟ್‌ಗಳಲ್ಲಿ ಲಭ್ಯವಿರು ಖಾದ್ಯಗಳ ರುಚಿ ಒಂದೇ ರೀತಿ ಇರಲು ನಮ್ಮದೇ ಪ್ರತ್ಯೇಕ ರೆಸಿಪಿ ಇದೆ. ಅದನ್ನು ಜನರಿಂದ ಅಭಿಪ್ರಾಯ ಸಂಗ್ರಹಿಸಿ ರೂಪಿಸಿದ್ದೇವೆ. 

ಅದರ ಜೊತೆಗೆ, ಪ್ರೊಡಕ್ಷನ್ ಪ್ಲಾನ್‌ ಅನ್ನು ಪಾಲಿಸಲುತ್ತೇವೆ. ಫುಡ್ ಸೇಫ್ಟಿ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ ಗುರುತಿಸಿದ ಪ್ರಮಾಣಕ್ಕಿಂತ ಮೇಲ್ಪಟ್ಟ ಗುಣಮಟ್ಟದ ಪದಾರ್ಥಗಳನ್ನೇ ಬಳಸುತ್ತೇವೆ. ನಂಬಿಕಾರ್ಹ ವ್ಯಾಪಾರಿಗಳಿಂದ ಅಡುಗೆ ಸಾಮಗ್ರಿಗಳನ್ನು ಖರೀದಿಸುತ್ತೇವೆ. ಆಹಾರದ ಗುಣಮಟ್ಟದ ಬಗ್ಗೆ ನಿತ್ಯ ನಿಗಾ ಇಟ್ಟಿರುತ್ತೇವೆ. ಗುಣಮಟ್ಟವಲ್ಲದ ಆಹಾರವನ್ನು ಪೂರೈಸುವುದಿಲ್ಲ. 25 ವರ್ಷಗಳಿಂದ ನಮ್ಮ ಬಳಿ ಕೆಲಸ ಮಾಡುತ್ತಿರುವ ಕೆಲಸಗಾರರ ಶ್ರಮವೇ ಇಲ್ಲಿ ಮಹತ್ವದ್ದು. ಇಂತಹದ್ದೇ ರೀತಿಯಲ್ಲಿ ಕೆಲಸ ಸಾಗಬೇಕೆಂಬ ಮಾನದಂಡ ನಮ್ಮ ಬಳಿ ಇದೆ. ಅದನ್ನು ಪಾಲಿಸುವ ವಿಚಾರದಲ್ಲಿ ರಾಜಿಯೇ ಇಲ್ಲ.

ನಿಮ್ಮ ಸಿಬ್ಬಂದಿಗೆ ಉದ್ಯೋಗ ಭದ್ರತೆಯಿದೆಯೇ?

ಸಂಸ್ಥೆಯಡಿ 1,600ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಭವಿಷ್ಯನಿಧಿ, ಗ್ರಾಚ್ಯುಯಿಟಿ, ಬೋನಸ್, ಇಎಸ್‌ಐ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿಯೊಬ್ಬರಿಗೂ ಉದ್ಯೋಗ ಕಾಯಂ ಮಾಡಲಾಗಿದೆ. ಅದಲ್ಲದೆ, 40–50 ಮಂದಿ ಅಂಗವಿಕಲರನ್ನು ಕೆಲಸಕ್ಕೆ ನೇಮಿಸಿಕೊಂಡು ನೆರವಾಗಿದ್ದೇವೆ. ಕೆಳಹಂತದ ಉದ್ಯೋಗಗಳಿಗೆ ನೇಮಕವಾಗುವವರಿಗೆ ಹಂತಹಂತವಾಗಿ ತರಬೇತಿ ನೀಡಿ ಉನ್ನತ ಜವಾಬ್ದಾರಿಯನ್ನು ನೀಡಲಾಗುತ್ತದೆ.

ಸಾರ್ವಜನಿಕರ ಪ್ರತಿಕ್ರಿಯೆ ಹೇಗಿದೆ?

ರೆಸ್ಟೋರಂಟ್, ಕೆಟರಿಂಗ್ ಹಾಗೂ ಆನ್‌ಲೈನ್ ವ್ಯಾಪಾರದಲ್ಲಿ ಪ್ರತಿ ಗ್ರಾಹಕರಿಂದ ನಾವು ಸಲಹೆಗಳನ್ನು ಪಡೆಯುತ್ತೇವೆ. ಅವರು ನೀಡುವ ಸಲಹೆಗಳನ್ನು ಪಾಲಿಸುತ್ತೇವೆ. ಇದುವರೆಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಷ್ಟಿಲ್ಲದಿದ್ದರೆ 25 ವರ್ಷ ಈ ಕ್ಷೇತ್ರದಲ್ಲಿ ಸಾಗಿಬರಲು ಸಾಧ್ಯವೇ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು