'ಕ್ಷುಲ್ಲಕ ಸಂಗತಿಗಳ ವೈಭವೀಕರಣ ನಿಲ್ಲಲಿ'

7

'ಕ್ಷುಲ್ಲಕ ಸಂಗತಿಗಳ ವೈಭವೀಕರಣ ನಿಲ್ಲಲಿ'

Published:
Updated:
Deccan Herald

ಬೆಂಗಳೂರು:‘ದೃಶ್ಯ ಮಾಧ್ಯಮದವರು ಕ್ಷುಲ್ಲಕ, ಸಣ್ಣ ಸಂಗತಿಗಳನ್ನು ವಿಜೃಂಭಿಸಿ, ಇಡೀ ದಿನ ಬಿತ್ತರಿಸುವುದನ್ನು ನಿಲ್ಲಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಹೇಳಿದರು. 

ನಗರದ ವಿ.ಎಚ್.ಡಿ.ಕೇಂದ್ರೀಯ ಗೃಹ ವಿಜ್ಞಾನ ಕಾಲೇಜು ಮಂಗಳವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕನ್ನಡ ಸಂಘ, ಪರಿಸರ ಚಟುವಟಿಕೆ ವಿವಿಧ ಸಂಘಗಳ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

‘ದೇಶದ ಪ್ರಮುಖ ವಿಚಾರಗಳು, ಬಡತನ, ನಿರುದ್ಯೋಗ, ಅತ್ಯಾಚಾರದಂತಹ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿಲ್ಲ. ದೃಶ್ಯ ಮಾಧ್ಯಮಗಳು ಅನಗತ್ಯ ಚರ್ಚೆ, ವೈಭವೀಕರಣಿದಿಂದ ಹೊರಬರಬೇಕು’ ಎಂದರು. 

‘ದೇಶ ಎಷ್ಟೇ ಅಭಿವೃದ್ಧಿಯಾಗುತ್ತಿದ್ದರೂ ಜಾತಿ ವ್ಯವಸ್ಥೆ, ಘರ್ಷಣೆಗಳು ನಡೆಯುತ್ತಲೆ ಇವೆ. ಇತರ ಜಾತಿ, ಧರ್ಮಗಳನ್ನು, ಆಚಾರ–ವಿಚಾರಗಳನ್ನು ಗೌರವಿಸಬೇಕು. ಅತ್ಯಾಚಾರ ದಲಿತರ ಮೇಲಿನ ದೌರ್ಜನ್ಯಗಳಿಂದ ದೇಶದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಜಾತಿ ವ್ಯವಸ್ಥೆಯನ್ನು ಮೀರಿ, ಪೂರ್ವಾಗ್ರಹ ಪೀಡಿತ ವಿಚಾರಗಳಿಂದ ಹೊರಬಂದು, ನವ ವಿಚಾರಗಳನ್ನು ಹುಟ್ಟು ಹಾಕಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 

‘ಮೌಲ್ಯಾಧಾರಿತ, ಉನ್ನತ ಶಿಕ್ಷಣ ಪಡೆದಾಗಲೂ ಉದ್ಯೋಗಾವಕಾಶಗಳು, ಸುಭದ್ರ ಆರ್ಥಿಕ ವ್ಯವಸ್ಥೆ ಇಲ್ಲದಿದ್ದಾಗ ವಿದ್ಯಾರ್ಥಿಗಳ ಬದುಕು ಅತಂತ್ರವಾಗುವುದಲ್ಲದೆ, ವ್ಯಸನಿಗಳಾಗುತ್ತಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯಾಗಿ ಕೌಶಲಯುತ ಶಿಕ್ಷಣ ದೊರೆತಾಗ ಇಂತಹ ಸಂಗತಿಗಳನ್ನು ತಪ್ಪಿಸಬಹುದು’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು. 

*‘102 ಕಾಲೇಜುಗಳಲ್ಲಿ ಕಟ್ಟಡಗಳಿಲ್ಲ’
*‘102 ಸರ್ಕಾರಿ ಪದವಿ ಕಾಲೇಜುಗಳಿಗೆ ಕಟ್ಟಡಗಳಿಲ್ಲ. ಮೈಸೂರು ಮಹಾರಾಣಿ ಕಾಲೇಜಿನಲ್ಲಿ ತರಗತಿ ಕೊಠಡಿಗಳು, 35 ಲ್ಯಾಬ್‌ಗಳ ಕೊರತೆ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಇದೆ’ ಎಂದು ಸಚಿವ ದೇವೇಗೌಡ ಹೇಳಿದರು. 
*‘2 ವರ್ಷದಲ್ಲಿ 100 ಕಾಲೇಜು ಕಟ್ಟಡಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದರು. 
*‘ಶುಲ್ಕ ನಿಯಂತ್ರಣಕ್ಕೆ ಬೇರೆ ಸಮಿತಿ ರಚನೆ ಮಾಡಿಲ್ಲ’ 
*‘ಉನ್ನತ ಶಿಕ್ಷಣ ಇಲಾಖೆಯಲ್ಲಿ ಶುಲ್ಕ ನಿಯಂತ್ರಣಕ್ಕಾಗಿ ಈಗಾಗಲೇ ಶೈಲೇಂದ್ರ ಅವರ ಸಮಿತಿ ಇದೆ. ಬೇರೆ ಸಮಿತಿ ರಚನೆಗೆ ಮುಂದಾಗಿಲ್ಲ’ ಎಂದು ಸಚಿವ ತಿಳಿಸಿದರು.
*ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ‘ಮುಂದಿನ ವರ್ಷದ ವೇಳೆಗೆ ಸಮಿತಿ ರಚನೆ ಮಾಡಲಿದ್ದೇವೆ. ಶೈಲೇಂದ್ರ, ಶಿಕ್ಷಣ ತಜ್ಞರ ಸಲಹೆ ಪಡೆದುಕೊಂಡೆ ಸಮಿತಿ ರಚನೆ ಮಾಡಲಾಗುವುದು’ ಎಂದರು. 
*‘ಬೆಂಗಳೂರು ವಿಶ್ವವಿದ್ಯಾಲಯ ತ್ರಿವಿಭಜನೆ ಆಗಿರುವುದರಿಂದ ಅಲ್ಲಿ ಪ್ರವೇಶ ಸಂಖ್ಯೆ ಇಳಿಕೆ, ಮೂಲಸೌಕರ್ಯಗಳ ಸಮಸ್ಯೆಗೆ ಪರಿಹಾರ ಕೈಗೊಳ್ಳುವಲ್ಲಿ ವಿಳಂಬವಾಗಿದೆ. ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳುವೆ’ ಎಂದು ಹೇಳಿದರು.
*‘ಹಾಲಿಯಾಗಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರನ್ನು ಮುಂದುವರಿಸುವುದು ಶಚಿತವಾಗಿದ್ದು, ಖಾಲಿ ಇರುವ ಸ್ಥಾನಗಳಿಗೆ ಹೊಸ ನೇಮಕಾತಿ ಮಾಡಿಕೊಳ್ಳಲು ಬೆಂಗಳೂರು ವಿವಿ ಕುಲಪತಿ ವೇಣುಗೋಪಾಲ ಅವರಿಗೆ ನಿರ್ದೇಶಿಸಲಾಗಿದೆ’ ಎಂದರು.
*‘ಮೈಸೂರು ವಿವಿಯಲ್ಲಿ ಖಾಲಿ ಇರುವ ಕುಲಪತಿ ಹುದ್ದೆ ನೇಮಕಕ್ಕೆ ಮಂಗಳವಾರ  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲಾಗಿದ್ದು, ಶೋಧನಾ ಸಮಿತಿ ರಚಿಸಿ, ಕ್ರಮಕೈಗೊಳ್ಳಲು ಕಾರ್ಯದರ್ಶಿಗೆ ತಿಳಿಸಿದ್ದೇನೆ’ ಎಂದು ಹೇಳಿದರು.  

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !