ಬೆತ್ತಲೆ ಮೆರವಣಿಗೆ: ವಿಡಿಯೊ ವೈರಲ್‌, ದೂರು ದಾಖಲಿಸದ ಪೊಲೀಸರು

ಭಾನುವಾರ, ಜೂನ್ 16, 2019
22 °C
ಗುಂಡ್ಲುಪೇಟೆ ತಾಲ್ಲೂಕಲ್ಲಿ ಘಟನೆ

ಬೆತ್ತಲೆ ಮೆರವಣಿಗೆ: ವಿಡಿಯೊ ವೈರಲ್‌, ದೂರು ದಾಖಲಿಸದ ಪೊಲೀಸರು

Published:
Updated:

ಚಾಮರಾಜನಗರ: ಯುವಕನೊಬ್ಬನನ್ನು ಬೆತ್ತಲೆ‌ ಮೆರವಣಿಗೆ ಮಾಡುತ್ತಿರುವ ವಿಡಿಯೊವೊಂದು ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗುಂಡ್ಲುಪೇಟೆ ತಾಲ್ಲೂಕಿನ ವೀರನಕಟ್ಟೆ ಗೇಟ್‌ ಬಳಿ ವಾರದ ಹಿಂದೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಇದರ‌ ಜೊತೆಗೆ, ‘ಮಾನವೀಯತೆ ಮರೆತು ದಲಿತ ಯುವಕನ ಬೆತ್ತಲೆ ಮೆರವಣಿಗೆ’ ಎಂಬ ಶೀರ್ಷಿಕೆ ಅಡಿಯಲ್ಲಿ‌ ಬರೆದಿರುವ ಪತ್ರವೊಂದು ಸಾಮಾಜಿಕ ‌ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಶನಿ ಮಹಾತ್ಮ ದೇವಸ್ಥಾನದ ವಿಗ್ರಹ ನಾಶ ಮಾಡಿದ್ದಾನೆ‌’ ಎಂದು ಆರೋಪಿಸಿ ಯುವಕನೊಬ್ಬನನ್ನು ಜೂನ್ 2ರಂದು ಥಳಿಸಿದ್ದ ಪ್ರಕರಣ ನಡೆದಿತ್ತು. ಯುವಕ ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿತ್ತು. ಅದೇ ಯುವಕನನ್ನು ಬೆತ್ತಲೆ‌ ಮೆರವಣಿಗೆ‌ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಯುವಕ ಗುಂಡ್ಲುಪೇಟೆ ತಾಲ್ಲೂಕಿನ ಶ್ಯಾನಾಡ್ರಹಳ್ಳಿಯ‌ ನಿವಾಸಿ ಎಸ್.ಪ್ರತಾಪ್ ಎಂದು ಹೇಳಲಾಗಿದೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಆದರೆ, ಘಟನೆ ತೀವ್ರ ಸ್ವರೂಪದಾಗಿದ್ದು, ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸದ ಪೊಲೀಸರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ.

ಪೋಸ್ಟ್‌ನಲ್ಲಿ ಏನಿದೆ?: ಜೂನ್‌ 2ರಂದು ಶ್ಯಾನಾಡ್ರಹಳ್ಳಿ ನಿವಾಸಿ ಎಸ್.ಪ್ರತಾಪ್ ಅವರು ಯುಪಿಎಸ್‌ಸಿ ಪರೀಕ್ಷೆ ಬರೆಯಲು ಮೈಸೂರಿನ ಮರಿಮಲ್ಲಪ್ಪ ಹಿರಿಯ ಪ್ರಾಥಮಿಕ ಶಾಲೆಗೆ ಹೋಗಿದ್ದರು. ತಡವಾದ ಕಾರಣ ಪರೀಕ್ಷೆ ವಂಚಿತರಾಗಿ, ಅದೇ ಬೇಸರದಿಂದ ಮೈಸೂರಿನಲ್ಲಿ ಕಾಲ ಕಳೆದು ವಾಪಸ್ಸು ಗುಂಡ್ಲುಪೇಟೆ ಕಡೆಗೆ ಬೈಕಿನಲ್ಲಿ ಬಂದಿದ್ದರು. ಅದೇ ದಿನ ರಾತ್ರಿ ರಾಘವಾಪುರ ಗ್ರಾಮದ ಹತ್ತಿರ ಬೈಕ್ ಕೆಟ್ಟುಹೋಗಿದ್ದು, ಅಲ್ಲಿ ಯಾರೋ ದುಷ್ಕರ್ಮಿಗಳು ಇವರನ್ನು ದರೋಡೆ ಮಾಡಿದ್ದಾರೆ.

ನಂತರ ಮಾನಸಿಕವಾಗಿ ಹೆದರಿದ ಇವರು ವೀರನಪುರ ಗೇಟ್ ಹತ್ತಿರವಿರುವ ಶನಿ ಮಹಾತ್ಮ (ಕೆಬ್ಬೆಕಟ್ಟೆ ಹತ್ತಿರ) ದೇವಸ್ಥಾನಕ್ಕೆ ಹೋಗಿದ್ದಾರೆ. ಮರುದಿನ ಬೆಳಿಗ್ಗೆ ಕಂಡ ಅರ್ಚಕರು ಅನುಮಾನ ವ್ಯಕ್ತಪಡಿಸಿ ವಿಚಾರಿಸಿದಾಗ ಅವರು ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೆಂದು ಗೊತ್ತಾಗಿದೆ. ಆಗ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿ ಬೆತ್ತಲೆಗೊಳಿಸಿ ಕೈಗೆ ಹಗ್ಗದಿಂದ ಕಟ್ಟಿ ಮೆರವಣಿಗೆ ನಡೆಸಿದೆ.

ಈ ರೀತಿ ಹಲ್ಲೆ, ಜಾತಿ ನಿಂದನೆ, ಬೆತ್ತಲೆ ಮೆರವಣಿಗೆ ನಡೆದು ವಾರವಾದರೂ ಪೊಲೀಸರು ಏಕೆ ಕ್ರಮ ಕೈಗೊಂಡಿಲ್ಲ? ಕನಿಷ್ಠ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಳ್ಳಬಹುದಿತ್ತು. ಈ ಪ್ರಕರಣವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿ ನೊಂದ ಪ್ರತಾಪ್ ಅವರಿಗೆ ನ್ಯಾಯ ಕೊಡಿಸಬೇಕು ಎಂದು ಸಹೋದರ ಕಾಂತರಾಜು ಅಳಲು ತೋಡಿಕೊಂಡಿರುವುದು ಪೋಸ್ಟ್‌ನಲ್ಲಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !