ಬುಧವಾರ, ಸೆಪ್ಟೆಂಬರ್ 29, 2021
20 °C

ಜಸ್ಟ್‌ ಮ್ಯೂಸಿಕ್‌ – 32 | ಸಾವಿನ ಮನೆಯ ಅತಿಥಿ!

ಗ್ರಾಮೀಣ ಭಾಗದ ಹರಿಕಥಾ ಕೀರ್ತನೆಕಾರ ಶಿವಾರ ಉಮೇಶ್‌ ಅವರು ಸಾವಿನ ಮನೆಯಲ್ಲಿ ನೊಂದ ಹೃದಯಗಳಿಗೆ ತತ್ವಪದಗಳ ಮೂಲಕ ಸಾಂತ್ವನ ಹೇಳುತ್ತಾರೆ. ಸಂಸ್ಕೃತ ಪ್ರಾಧಾನ್ಯದ ಹರಿಕಥೆಗೆ ಆಡುಭಾಷೆ ಪ್ರಾಧಾನ್ಯವಾಗಿರುವ ವಚನ ಸೇರಿಸಿ ಕೀರ್ತನಾ ಪ್ರಕಾರದಲ್ಲಿ ಹೊಸ ಪ್ರಯೋಗ ಮಾಡಿದ್ಧಾರೆ. ಅಕ್ಕ ಬಸವಣ್ಣ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ, ಅಲ್ಲಮಪ್ರಭು, ಮಡಿವಾಳ ಮಾಚಿದೇವರ ವಚನಗಳು, ಸರ್ವಜ್ಞನ ತ್ರಿಪದಿಗಳು, ಗ್ರಾಮಿಣ ದೇವರ ಜನಪದ ಗೀತೆ, ಸೋಬಾನೆ ಪದಗಳನ್ನೂ ಹರಿಕಥೆಯೊಂದಿಗೆ ಬೆಸೆದಿದ್ದಾರೆ. ಹರಿಕಥೆಯ ನಡುವೆ ಮೂಡಿಬರುವ ಅವರ ತಮಾಷೆಯ ಉಪಕತೆಗಳು ಜನರನ್ನು ನಕ್ಕು ನಲಿಸುತ್ತವೆ. ಅವರ ತಮಾಷೆಯ ಮಾತುಗಳು, ತತ್ವಪದಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಶಿವಾರ ಉಮೇಶ್‌ ಅವರ ಹಿತಾನುಭವ ಈ ವಾರದ ‘ಜಸ್ಟ್‌ ಮ್ಯೂಸಿಕ್‌’ಸರಣಿಯಲ್ಲಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...